ರಾಜ್ಯದಲ್ಲಿ ಸೋಂಕು ,ಸಾವಿನ‌ ಸಂಖ್ಯೆ ಇಳಿಕೆ

ಬೆಂಗಳೂರು, ಸೆ.23- ರಾಜ್ಯದಲ್ಲಿ ಕೋರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ‌ತುಸು ಇಳಿಕೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 836 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 15 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 852 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ

ಚಿಕ್ಕಬಳ್ಳಪುರ, ಗದಗ,ಹಾವೇರಿ ಕೊಪ್ಪಳ, ರಾಯಚೂರು,ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.57 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ 1.79 ಕ್ಕೆ ಇಳಿಕೆಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13,590 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,71,044 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,19 742 ಕ್ಕೆ ಹೆಚ್ಚಳವಾಗಿದೆ.

ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,683 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಇಳಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ .ಇಂದು 310 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 7 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 239 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1.45 ಲಕ್ಷ ಪರೀಕ್ಷೆ

ರಾಜ್ಯದಲ್ಲಿ ಇಂದು 1,45,085 ಮಂದಿ್ಗೆಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 4,67,78,755 ಕ್ಕೆ ಹೆಚ್ಚಳವಾಗಿದೆ.

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

 • ಬಾಗಲಕೋಟೆ – 1
 • ಬಳ್ಳಾರಿ – 3
 • ಬೆಳಗಾವಿ -7
 • ಬೆಂಗಳೂರು ಗ್ರಾಮಾಂತರ- 17
 • ಬೆಂಗಳೂರು ನಗರ. – 310
 • ಬೀದರ್ -3
 • ಚಾಮರಾಜನಗರ – 5
 • ಚಿಕ್ಕಬಳ್ಳಾಪುರ – 0
 • ಚಿಕ್ಕಮಗಳೂರು- 26
 • ಚಿತ್ರದುರ್ಗ – 2
 • ದಕ್ಷಿಣ ಕನ್ನಡ -106
 • ದಾವಣಗೆರೆ -2
 • ಧಾರವಾಡ -3
 • ಗದಗ – 0
 • ಹಾಸನ – 47
 • ಹಾವೇರಿ – 0
 • ಕಲಬುರಗಿ- 5
 • ಕೊಡಗು – 37
 • ಕೋಲಾರ -15
 • ಕೊಪ್ಪಳ -0
 • ಮಂಡ್ಯ – 18
 • ಮೈಸೂರು -78
 • ರಾಯಚೂರು -0
 • ರಾಮನಗರ -3
 • ಶಿವಮೊಗ್ಗ – 22
 • ತುಮಕೂರು -25
 • ಉಡುಪಿ – 69
 • ಉತ್ತರ ಕನ್ನಡ – 32
 • ವಿಜಯಪುರ – 0
 • ಯಾದಗಿರಿ- 0