ರಾಜ್ಯದಲ್ಲಿ ಸೋಂಕು ಇಳಿಕೆ, ಚೇತರಿಕೆ ಏರಿಕೆ

ಬೆಂಗಳೂರು,ಜೂ.5 – ರಾಜ್ಯದಲ್ಲಿ ಸರಿಸುಮಾರು 50 ದಿನಗಳ ನಂತರ ಕೊರೊನಾ ಸೋಂಕು ಸಂಖ್ಯೆ 13,800 ಮಂದಿಗೆ ದೃಢಪಟ್ಟಿದ್ದು ಒಟ್ಟಾರೆ ಪಾಸಿಟೀವ್ ಪ್ರಕರಣ ಸಂಖ್ಯೆ ರಾಜ್ಯದಲ್ಲಿ ಶೇ 10ಕ್ಕಿಂತ ಕಡಿಮೆ ದಾಖಲಾಗಿದೆ.

ಜೊತೆಗೆ ಸೋಂಕಿನಿಂದ ಚೇತರಿಕೆ ಪ್ರಮಾಣ‌ ಕಳೆದ 24 ಗಂಟೆಗಳಲ್ಲಿ ದ್ವಿಗುಣಗೊಂಡಿದೆ. ಇಂದು 25,346 ಮಂದಿ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಗುಣಮುಖರಾದವರ ಸಂಖ್ಯೆ 23,83,758 ಕ್ಕೆ ಏರಿಕೆಯಾಗಿದೆ.

ಇಂದು ಕಾಣಿಸಿಕೊಂಡಿರುವ 13,8000 ಸೋಂಕು ಸೇರಿದಂತೆ ಇಲ್ಲಿಯ ತನಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ 26,83,314ಕ್ಕೆಹೆಚ್ಚಾಗಿದೆ.

ಕಳೆದ 24 ಗಂಟೆಗಳಲ್ಲಿ 365 ಮಂದಿ ಸಾವನ್ನಪ್ಪಿದ್ದು ಇಲ್ಲಿಯ ತನಕ ಮೃತಪಟ್ಟವರ ಸಂಖ್ಯೆ 31,260 ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಸದ್ಯದಲ್ಲಿ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ‌ಸಂಖ್ಯೆ 2,68,33,14 ಕ್ಕೆ ‌ಕುಸಿದಿದೆ.‌ಕಳೆದ 1 ತಿಂಗಳ ಅವಧಯಲ್ಲಿ ಸರಿ ಸುಮಾರು 2 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ.

1,42 ಲಕ್ಷ ಪರೀಕ್ಷೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,42,291 ಮಂದಿಗೆ ಕೊರೊನಾ‌ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 3,04,42,176ಕ್ಕೆ ಏರಿಕೆಯಾಗಿದೆ.

ಯಾವಾವ ಜಿಲ್ಲೆಯಲ್ಲಿ ಎಷ್ಟು

ಜಿಲ್ಲೆ – ಸೋಂಕು, – ಬಿಡುಗಡೆ

 • ಬಾಗಲಕೋಟೆ- 175 – 126
 • ಬಳ್ಳಾರಿ – 345. – 768
 • ಬೆಳಗಾವಿ – ‌‌‌‌‌ 847 – 1441
 • ಬೆಂಗಳೂರು ಗ್ರಾಮಾಂತರ- 326 – 402
 • ಬೆಂಗಳೂರು ನಗರ. – 2,686 – 8852
 • ಬೀದರ್ 23 – 48
 • ಚಾಮರಾಜನಗರ- 340- – 266
 • ಚಿಕ್ಕಬಳ್ಳಾಪುರ- 432- 314
 • ಚಿಕ್ಕಮಗಳೂರು- 378 – 665
 • ಚಿತ್ರದುರ್ಗ- 449. – 415
 • ದಕ್ಷಿಣ ಕನ್ನಡ – 714. – 804
 • ದಾವಣಗೆರೆ- 259- – 511
 • ಧಾರವಾಡ- 247- – 633
 • ಗದಗ- 152- – 328
 • ಹಾಸನ- 568. 1537
 • ಹಾವೇರಿ- 88, – 151
 • ಕಲಬುರಗಿ- 69. 134
 • ಕೊಡಗು- 255, 199
 • ಕೋಲಾರ- 424, 736
 • ಕೊಪ್ಪಳ- 279. 513
  *‌ ಮಂಡ್ಯ- 562, 681
 • ಮೈಸೂರು- 1155, 1633
 • ರಾಯಚೂರು- 110, 216
 • ರಾಮನಗರ – 57, 144
 • ಶಿವಮೊಗ್ಗ- 710. 1033
 • ತುಮಕೂರು- 695, 1194
 • ಉಡುಪಿ- 552, 734
 • ಉತ್ತರ ಕನ್ನಡ- 552. 734
  *‌ ವಿಜಯಪುರ – 254, 319
 • ಯಾದಗಿರಿ- 54, 194