ರಾಜ್ಯದಲ್ಲಿ ಶೇ.7.71 ಕ್ಕೆ ಕುಸಿದ ಪಾಸಿಟೀವ್ ಪ್ರಕರಣ

ಬೆಂಗಳೂರು, ಜೂ.6- ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪಾಸಿಟೀವ್ ಪ್ರಮಾಣ ಶೇಕಡಾ 7.71ಕ್ಕೆ ಕುಸಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಕಳೆದ ಎರಡು ತಿಂಗಳಿಂದ ಸೋಂಕಿತರ ಸಂಖ್ಯೆ ದಿನೇ ದಿನಕ್ಕೇ ಹೆಚ್ಚಾಗಿ ರಾಜ್ಯಾದ್ಯಂತ ಆತಂಕ ಸೃಷ್ಟಿಗೆ ಕಾರಣವಾಗಿತ್ತು.ಕಳೆದ ಎರಡು ಮೂರು ದಿನಗಳಿಂದ ಪಾಸೀಟಿವ್ ಪ್ರಕರಣ ಕಡಿಮೆಯಾಗುತ್ತಿರುವುದು ತುಸು ನಮ್ಮದಿ ‌ನಿಟ್ಟಿಸಿರು‌ ಬಿಡುವಂತಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 12,209 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು 320 ಮಂದಿ ಸಾವನ್ನಪ್ಪಿದ್ದಾರೆ.

ಇಂದು 12,209 ಮಂದಿಯಲ್ಲಿ ಕಾಣಿಸಿಕೊಂಡಿರುವ ಸೋಂಕು ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 2,69,55,23 ಕ್ಕೆ ಸೋಂಕು ಸಂಖ್ಯೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31,580ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಹೊಸದಾಗಿ 2944 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದುವರೆಗೂ ಒಟ್ಟಾರೆ ಸೋಂಕಿನ ಸಂಖ್ಯೆ ಬೆಂಗಳೂರಿನಲ್ಲಿ 1,17,,340 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,54,505 ಕ್ಕೆ ಕುಸಿದಿದೆ. ಈ ಮೂಲಕ ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರೂವರೆ ಲಕ್ಷ ಸಕ್ರಿಯ ಪ್ರಕರಣಗಳು ಕಡಿಮೆ ಆಗಿವೆ

ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ಇಂದೂ ಕೂಡ ಗಣನೀಯವಾಗಿ ಏರಿಕೆಯಾಗಿದೆ.ಇಂದು ಬೆಂಗಳೂರಿನಲ್ಲಿ‌ 10,224 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 25,629 ಮಂದಿ ಚೇತರಿಸಿಕೊಂಡಿದ್ದಾರೆ ಇದರೊಂದಿಗೆ ರಾಜ್ಯದಲ್ಲಿ ಚೇತರಿಸಿಕೊಂಡವರ ಸಂಖ್ಯೆ 20,09,,417ಕ್ಕೆ ಏರಿಕೆಯಾಗಿದೆ.

1.58 ಲಕ್ಷ ಮಂದಿಗೆ ಪರೀಕ್ಷೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,58,274 ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಇದರೊಂದಿಗೆ ರಾಜ್ಯದ ಒಟ್ಟಾರೆಯಾಗಿ
3,06,00450 ಮಂದಿಗೆ ಪರೀಕ್ಷೆ ಮಾಡಲಾಗಿದೆ.

ಇಂದಿನ ಸೋಂಕು

ಜಿಲ್ಲೆ ಎಷ್ಟು

 • ಬಾಗಲಕೋಟೆ- 166
 • ಬಳ್ಳಾರಿ – 285
 • ಬೆಳಗಾವಿ – 418
 • ಬೆಂಗಳೂರು ಗ್ರಾಮಾಂತರ- 277
 • ಬೆಂಗಳೂರು ನಗರ. – 2,944
 • ಬೀದರ್ 7
 • ಚಾಮರಾಜನಗರ- 247
 • ಚಿಕ್ಕಬಳ್ಳಾಪುರ- 348
 • ಚಿಕ್ಕಮಗಳೂರು- 416
 • ಚಿತ್ರದುರ್ಗ- 266
 • ದಕ್ಷಿಣ ಕನ್ನಡ – 609
 • ದಾವಣಗೆರೆ- 143
 • ಧಾರವಾಡ- 262
 • ಗದಗ- 133
 • ಹಾಸನ- 655
 • ಹಾವೇರಿ- 138
 • ಕಲಬುರಗಿ- 60
 • ಕೊಡಗು- 162
 • ಕೋಲಾರ- 257
 • ಕೊಪ್ಪಳ- 212
 • ಮಂಡ್ಯ- 571
 • ಮೈಸೂರು- 1237
 • ರಾಯಚೂರು- 104
 • ರಾಮನಗರ – 60
 • ಶಿವಮೊಗ್ಗ- 456
 • ತುಮಕೂರು- 698
 • ಉಡುಪಿ- 494
 • ಉತ್ತರ ಕನ್ನಡ- 360
 • ವಿಜಯಪುರ – 190
 • ಯಾದಗಿರಿ- 34