ರಾಜ್ಯದಲ್ಲಿ ಶೀಘ್ರ 436 “ನಮ್ಮ ಕ್ಲಿನಿಕ್” ಆರಂಭ – ಡಾ.ಸುಧಾಕರ್

ಬೆಂಗಳೂರು,ಆ.5- ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ” ನಮ್ಮ ಕ್ಲಿನಿಕ್‌ಗಳು” ಶೀಘ್ರದಲ್ಲಿ ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ. ಸುದಾಕರ್ ಹೇಳಿದ್ದಾರೆ.ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶವನ್ನು ತಂದು ಕೊಡಲಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.ಆಡಳಿತ ಮತ್ತು ಅಭಿವೃದ್ಧಿಯಲ್ಲಿ ರಾಜ್ಯದ ಜನತೆಯ ಸಕ್ರಿಯ ಭಾಗವಹಿಸುವಿಕೆಯನ್ನು ಸರ್ಕಾರ ನಿರೀಕ್ಷೆ ಮಾಡುತ್ತಿದೆ. ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ ಆಕರ್ಷಕ ಲೋಗೋ ವಿನ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.ಆಯ್ಕೆಯಾದ ವಿನ್ಯಾಸವನ್ನು ಡಿಸೈನ್‌ ಮಾಡಿದವರಿಗೆ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಂದ ವಿಶೇಷ ವೈಯಕ್ತಿಕ ಗೌರವ ಸಿಗಲಿವೆ ಎಂದು ಹೇಳಿದ್ದಾರೆ.

ವಿನ್ಯಾಸಕ್ಕೆ ಆಹ್ವಾನ:

ಇಂದಿನಿಂದ ಆಗಸ್ಟ್‌ 15ರ* ಒಳಗೆ ಲೊಗೋ ವಿನ್ಯಾಸ ಕಳುಹಿಸುವಂತೆ ತಿಳಿಸಿದ್ದಾರೆ.ನಮ್ಮ ಕ್ಲಿನಿಕ್‌* ಜೊತೆ ಕೈ ಜೋಡಿಸಲು ಆರೋಗ್ಯ ಇಲಾಖೆ ಸುವರ್ಣಾವಕಾಶ ಮಾಡಿಕೊಟ್ಟಿದೆ. ಸರ್ಕಾರ ‘ನಮ್ಮ ಕ್ಲಿನಿಕ್‌”ಗೆ ವಿಶಿಷ್ಟವಾದ ಗುರುತನ್ನು ಎದುರು ನೋಡುತ್ತಿದೆ. ಸೃಜನಾತ್ಮಕ ಮತ್ತು ನವೀನ ಲೋಗೋ ವಿನ್ಯಾಸ ಮಾಡಲು ರಾಜ್ಯದ ಜನತೆ ಅವಕಾಶವಿದೆ ಎಂದಿದ್ದಾರೆ.