ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರದ್ದು

ಬೆಂಗಳೂರು, ನ. ೬- ರಾಜ್ಯದಲ್ಲಿ ಕೊರೊನಾ ೨ನೇ ಅಲೆ ಆರ್ಭಟಿಸಿದ ಸಂದರ್ಭದಲ್ಲಿ ಸೋಂಕು ನಿಯಂತ್ರಿಸಲು ಜಾರಿ ಮಾಡಲಾಗಿದ್ದ ರಾತ್ರಿ ಕರ್ಫ್ಯೂವನ್ನು ರದ್ದು ಗೊಳಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂವನ್ನು ರಾಜ್ಯಸರ್ಕಾರ ರದ್ದುಗೊಳಿಸಿದೆ.
ಪ್ರತಿದಿನ ರಾತ್ರಿ ೧೦ ರಿಂದ ಬೆಳಗಿನ ಜಾವ ೫ ಗಂಟೆಯವರೆಗೆ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಿದೆ.
ರಾಜ್ಯಸರ್ಕಾರ ಮುಖ್ಯಕಾಂiiದರ್ಶಿ ಮತ್ತು ವಿಪತ್ತು ನಿರ್ವಹಣಾ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿರುವ ಪಿ. ರವಿಕುಮಾರ್ ಅವರು ರಾತ್ರಿ ಕರ್ಫ್ಯೂವನ್ನು ಹಿಂಪಡೆಯುವ ಆದೇಶ ಹೊರಡಿಸಿದ್ದಾರೆ.
ಕುದುರೆ ರೇಸ್‌ಗೂ ಅನುಮತಿ
ಇದೇ ಆದೇಶದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿನೊಂದಿಗೆ ಕುದುರೆ ರೇಸ್‌ಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಕುದುರೆ ರೇಸುಗಳ ಈ ಪಂದ್ಯಗಳಲ್ಲಿ ಕುದುರೆಯ ಪಾಲಕರು ಭಾಗವಹಿಸಬಹುದು. ಆದರೆ, ಅವರೆಲ್ಲರೂ ೨ ಡೋಸ್ ಕೋವಿಡ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾದ ನಂತರ ಎಲ್ಲ ಚಟುವಟಿಕೆಗಳು ಪುನರಾರಂಭಗೊಂಡಿದ್ದರೂ ರಾತ್ರಿ ಕರ್ಫ್ಯೂವನ್ನು ಮಾತ್ರ ಮುಂದುವರೆಸಲಾಗಿತ್ತು. ಈಗ ರಾತ್ರಿ ಕರ್ಫ್ಯೂವನ್ನು ಹಿಂಪಡೆದಿರುವುದರಿಂದ ಕೊರೊನಾ ಪೂರ್ವದ ಪರಿಸ್ಥಿತಿ ಬಂದಂತಾಗಿದೆ.

ರಾತ್ರಿ ಕರ್ಫ್ಯೂವನ್ನು ಹಿಂಪಡೆದ ರಾಜ್ಯಸರ್ಕಾರ.

ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ.

ರಾಜ್ಯದಲ್ಲಿ ರಾತ್ರಿ ೧೦ ರಿಂದ ಬೆಳಿಗ್ಗೆ ೫ ಗಂಟೆಯವರೆಗೆ ಜಾರಿಯಲ್ಲಿದ್ದ ಕರ್ಫ್ಯೂ ರದ್ದು.

ಕುದುರೆ ರೇಸಿಗೂ ಅನುಮತಿ.