ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರ;  ಕಾಂಗ್ರೆಸ್ ಪ್ರತಿಭಟನೆ

ದಾವಣಗೆರೆ. ಮಾ.೧೯; ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳು ಶೇ.40 ರಷ್ಟು ಕಮೀಷನ್ ನೀಡದೇ ಯಾವುದೇ ಕಾಮಗಾರಿಗಳು ಆರಂಭವಾಗಲು ಬಿಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು  ದಾವಣಗೆರೆ ನಗರದ ಅಶೋಕ ಚಿತ್ರಮಂದಿರದ ಹತ್ತಿರ  ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಕೆ ಶೆಟ್ಟಿ  ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಮಿತಿ ಮೀರಿದ್ದು, ಭ್ರಷ್ಟಾಚಾರಕ್ಕೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳು ಕಾರಣ .ದಾವಣಗೆರೆ ಜಿಲ್ಲೆಯಲ್ಲೂ ಸಹ  ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ್ ಅವರುಗಳು ಶೇ.40 ರಷ್ಟು ಕಮೀಷನ್ ನೀಡದೇ ಯಾವುದೇ ಕಾಮಗಾರಿಗಳು ಆರಂಭವಾಗಲು ಬಿಡುತ್ತಿಲ್ಲ. ಇದಕ್ಕೆ ಅಶೋಕ ಚಿತ್ರಮಂದಿರ ಬಳಿ ನಡೆಯುತ್ತಿರುವ ರೈಲ್ವೆ ಅಂಡರ್‍ಪಾಸ್ ಕಾಮಗಾರಿಯೇ ಸಾಕ್ಷಿಯಾಗಿದ್ದು, ಕೇವಲ 1-2 ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮಗಾರಿಯನ್ನು ಒಂದು ವರ್ಷವಾಗುತ್ತ ಬಂದಿದ್ದರು ಮುಕ್ತಾಯ ಮಾಡುತ್ತಿಲ್ಲ, ಸಂಸದರ ಕಮೀಷನ್ ಆಸೆಯಿಂದ ಕಳಪೆ ಕಾಮಗಾರಿ ನಡೆದು ಈ ಹಿಂದೆಮ್ಮೊ ಕಾಮಗಾರಿ ನಡೆಯುವ ವೇಳೆಯೇ ಕುಸಿತ ಉಂಟಾಗಿತ್ತು ಎಂದರು. ಪ್ರತಿಭಟನೆಯಲ್ಲಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಮಾಗಾನಹಳ್ಳಿ ಪರಶುರಾಮ್, ಜಿ.ಸಿ.ನಿಂಗಪ್ಪ, ಮಹಾಪೌರ ವಿನಾಯಕ ಪೈಲ್ವಾನ್, ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ ಮತ್ತಿತರರು ಹಾಜರಿದ್ದರು.