ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ: ಮುನಿಸ್ವಾಮಿ

filter: 0; jpegRotation: 0; fileterIntensity: 0.000000; filterMask: 0; module:0facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 79.0; hist255: 0.0; hist252~255: 0.0; hist0~15: 0.0;

ಕೆಜಿಎಫ್.ಏ.೨೬- ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರ ನಡುವೆ ಆರೋಪ ಪ್ರತಿಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ .
ಕರ್ನಾಟಕ ರಾಜ್ಯದಲ್ಲಿ ಹಿಂದುಗಳ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ಬಂದಿದೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಕೊಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಲು ಸರ್ಕಾರ ನಿರ್ಲಕ್ಷವಹಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಣಿಕೆಯಲ್ಲಿ ಒಂದು ವರ್ಗದ ಸಮುದಾಯದವರನ್ನು ಒಲೈಸುವಂತಿದೆ ಒಂದು ರೀತಿಯಲ್ಲಿ ಪಾಕಿಸ್ತಾನ ದೇಶದ ಏಜೆಂಟ್ ಆಗಿ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ ಎಂಬುದು ದೃಢವಾಗುತ್ತಿದೆ ಆದ್ದರಿಂದ ದೇಶದ ಸುಭದ್ರತೆಗಾಗಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ರವರಿಗೆ ಮತ ನೀಡುವ ಮೂಲಕ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರಿಗೆ ಸಹಾಯ ಮಾಡಬೇಕು ಎಂದು ಸಂಸದ ಮುನಿಸ್ವಾಮಿ ಹೇಳಿದರು.
ರೈತರ ಬಡವರ ಹಿತಕಾಯುವ ನಿಟ್ಟಿನಲ್ಲಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳು ಕಟ್ಟಕಡೆಯ ಫಲಾನುಭವಿಗಳಿಗೆ ತಲುಪುತ್ತಿದೆ. ಅಮೃತಸಿಟಿಯಲ್ಲಿ ೧೭೦ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದು ಅಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಕೆಜಿಎಫ್ ನಗರದಲಿ ಯುಜಿಡಿ ಕಾಮಗಾರಿಗಳು ನಡೆದಿರುವುದು ಎಂಬುದನ್ನು ಎಲ್ಲರಿಗೂ ತಿಳಿದ ವಿಚಾರವೆಂದರು.
ನಾನು ಕಳೆದ ೫ ವರ್ಷಗಳು ಸಂಸದನಾಗಿ ಕೆಜಿಎಫ್ ಬಂಗಾರಪೇಟೆ ಮಾಲೂರು ರೈಲ್ವೆ ಇಲಾಖೆಯಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದ್ದೇನೆ. ಎಲ್ಲಾ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಕೆ ಮಾಡಲು ಮಾರಿಕುಪ್ಪ ಕುಪ್ಪಂ ರೈಲ್ವೆ ಹಳಿಗಳ ಜೊಡಣೆಗಾಗಿ ೫೦೦ ಕೋಟಿ ಬಿಡುಗಡೆ ಮಾಡಲಾಗಿದೆ. ಜನಜೀವನ್ ಯೋಜನೆಯಲ್ಲಿ ೧೭೮೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. ಆದರೆ ೩೫ ವರ್ಷಗಳಿಂದ ಸಂಸದ ಸಚಿವರಾಗಿದ್ದ ಕೆಹೆಚ್.ಮುನಿಯಪ್ಪ ರವರ ಕೊಡುಗೆ ಏನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಜಯಪ್ರಕಾಶನಾಯ್ಡು,ಕಮಲನಾಥನ್,ನವೀನ್‌ರಾಮ್ ನಗರ ಬಿಜೆಪಿ ಅಧ್ಯಕ್ಷ ಸುರೇಶಕುಮಾರ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲಕ್ಷ್ಮಿನಾರಾಯಣ, ಮಾರಿಕುಪ್ಪಂ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಯರಾಮರೆಡ್ಡಿ, ಕಣ್ಣೂರು ವಿಜಿ ,ವಕೀಲ ಹರಿನಾಥ್, ಕೃಷ್ಣರೆಡ್ಡಿ ,ಕೃಷ್ಣಮೂರ್ತಿ ,ಹುನುಮಂತಪ್ಪ ಹಾಗೂ ಇತರರು ಹಾಜರಿದ್ದರು.