ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮೊಳಗಿದ ಬಿಜೆಪಿ ಸರ್ಕಾರ- ಹೆಚ್ ಬಿ ಮುರಾರಿ

ಗುದ್ದಲಿ ಪೂಜೆಗೆ ಸೀಮಿತವಾದ ಶಾಸಕ ಡಿ.ಎಸ್ ಹೂಲಗೇರಿ
ಲಿಂಗಸೂಗೂರ.ನ.೦೬- ದೇಶದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮೊಳಗಿದೆ ಎಂದು ಕಾಂಗ್ರೆಸ್ ಮೀಸಲು ಕ್ಷೇತ್ರದ ಸ್ಥಳೀಯ ಆಕಾಂಕ್ಷಿ ಹೆಚ್.ಬಿ ಮುರಾರಿ ಆರೋಪಿಸಿದರು.
ತಾಲೂಕಿನ ಹಟ್ಟಿ ಪಟ್ಟಣದಲ್ಲಿ ೮ನೇ ದಿನದ ಭಾರತ ಜೋಡೋ ಪಾದಯಾತ್ರೆಯಲ್ಲಿ ಪಟ್ಟಣದ ಹೆದ್ದಾರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಮಸ್ಕಾರ ಮಾಡಿ ಮಾತನಾಡಿದ ಅವರು ಲಿಂಗಸಗೂರು ಮೀಸಲು ಕ್ಷೇತ್ರದಲ್ಲಿ ೪೦ ಪರಿಷಂಟ್ ಜ್ ಭ್ರಷ್ಟಾಚಾರ ತುಂಬಿತುಳುಕುತ್ತಿದೆ, ದೇಶದಲ್ಲಿ ಬಿಜೆಪಿ ಸರ್ಕಾರ ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಹಣವನ್ನು ಕೊಳ್ಳೆ ಹೊಡಿಯುತ್ತಿದ್ದಾರೆ, ಮುಂದಿನ ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ, ಅದರಂತೆ ಲಿಂಗಸಗೂರು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷೆಯಾಗಿದ್ದು, ದಲಿತ ಅಸ್ಪೃಶ್ಯರಿಗೆ ಕಾಂಗ್ರೆಸ್ ಹೈಕಮಾಂಡ್ ಲಿಂಗಸೂಗೂರು ಮೀಸಲು ಕ್ಷೇತ್ರಕ್ಕೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಲಿ ಮಾಜಿ ಶಾಸಕರ ರಾಜಕಾರಣ ಕ್ಷೇತ್ರದಲ್ಲಿ ಕರಾಳ ಚಾಯವಾಗಿ ಮೂಡಿದೆ, ಇವರಿಬ್ಬರ ನಡೆಯಿಂದ ಕ್ಷೇತ್ರದಲ್ಲಿ ಜನ ಬೇಸತ್ತು ಭಾರತ ಜೋಡೋ ಪಾದಯಾತ್ರೆಯಲ್ಲಿ ಜನರು ಇಬ್ಬರ ನಡೆಯನ್ನು ಖಂಡಿಸಿದ್ದಾರೆ, ಅಭಿವೃದ್ಧಿ ಕೇವಲ ಗುದ್ದಲಿ ಪೂಜೆಗೆ ಸೀಮಿತವಾದ ಶಾಸಕ, ಗ್ರಾಮೀಣ ಕ್ಷೇತ್ರದಲ್ಲಿ ಸಂಪೂರ್ಣ ಹಾಳಾಗಿದ್ದು ಕಂಡು ಬಂದಿದೆ, ಅಭಿವೃದ್ಧಿ ಎಂಬುದು ಕೇವಲ ಗುದ್ಲಿ ಪೂಜೆಗೆ ಸೀಮಿತವಾಗಿ ಮಾರ್ಪಟ್ಟಿದೆ ಎಂದು ಕಟುವಾಗಿ ಎಚ್ ಬಿ ಮುರಾರಿ ಇವರು ಟಿಕಿಸಿದರು.
ಈ ಸಂದರ್ಭದಲ್ಲಿ ಜೆ ಬಾಬು, ಅಂಬೇಡ್ಕರ್ ಸಂಘದ ಅಧ್ಯಕ್ಷ ದೇವಪ್ಪ ಹಟ್ಟಿ, ಭೀಮಣ್ಣ ನಗನೂರು, ಪಂಪಾಪತಿ ಪರಂಗಿ ವಕೀಲರು, ರೈತ ಮುಖಂಡ ಮಲ್ಲನಗೌಡ ರಾಂಪುರ, ಬಸವರಾಜ ಯಲಗಟ್ಟಾ ನೂರಾರು ಕಾರ್ಯಕರ್ತರು ಇದ್ದರು.