
ಸಿರವಾರ,ಮಾ.೨೩- ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಶ್ರಮಿಸಿ ದುಡಿದಾಗ ಪಕ್ಷ ಅಧಿಕಾರಕ್ಕೆ ಬರುತ್ತದೆ.
೨೦೨೩ ರ ಚುನಾವಣೆಯಲ್ಲಿ ಬಿಜೆಪಿ ನಿಶ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದರು. ಪಕ್ಷದ ವಿವಿದ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ ಆಗಮಿಸಿ, ರಾಯಚೂರುನಿಂದ ಲಿಂಗಸುಗೂರಿಗೆ ಸಿರವಾರ ಮಾರ್ಗವಾಗಿ ತೆರಳುತ್ತಿರುವಾಗ ಪಟ್ಟಣದ ಹೊರವಲಯದ ಹೆಚ್.ಬಿ.ಪೆಟ್ರೋಲ್ ಬಂಕ್ ಹತ್ತಿರ ಹೂ ಮಾಲೆ ಹಾಕಿ ಅದ್ದೂರಿಯಾಗಿ ಸ್ವಾಗತಿಸಿ, ೧೫೦೦ ಕ್ಕೂ ಅಧಿಕ ಬೈಕ್ ಮೂಲಕ ಬಸವೇಶ್ವರ ವೃತ್ತದಿಂದ ಮುಖ್ಯರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದವರೆಗೂ ಕರೆತರಲಾಯಿತು.
ಪ್ರಮುಖ ವೃತ್ತದಲ್ಲಿ ಪಟಾಕಿ ಸಿಡಿಸಿ ಹೂ ಎರಚಲಾಯಿತು. ಬಸ್ ನಿಲ್ದಾಣದಲ್ಲಿ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯೇಂದ್ರ ನನಗೆ ಇಷ್ಟು ಅದ್ದೂರಿಯಾಗಿ ಬರಮಾಡಿಕೊಳುತ್ತಿರಿ ಎಂದುಕೊಂಡಿದಿಲ, ನನ್ನ ತಂದೆಯವರಿಗೆ ತೊರಿತ್ತಿದ್ದ ಪ್ರೀತಿ ವಿಶ್ವಾಸ ನನ್ನ ಮೇಲೆ ತೊರಿಸುತ್ತಿರುವುದಕ್ಕೆ ನಾನು ಚಿರ ಋಣಿಯಾಗಿರುವೆ, ನಾನು ಏನು ಸಾಧನೆ ಮಾಡಿಲ್ಲ, ಪಕ್ಷ ವಹಿಸಿರುವ ಕೆಲಸವನ್ನು ಚಾಚು ತಪ್ಪದೆ ಮಾಡಿಕೊಂಡು ಹೋಗುತ್ತಿರುವೆ. ಮುಖಂಡರು, ಪ್ರತಿಯೊಬ್ಬ ಕಾರ್ಯಕರ್ತರು ಕೇಂದ್ರ- ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮತದಾರರಿಗೆ ತಿಳಿಸಿ, ಹೀಗೆ ಶ್ರಮಿಸಿದರೆ ೨೦೨೩ ಕ್ಕೆ ನಿಶ್ಚಳ ಬಹುಮತದೊಂದಿಗೆ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ.
ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಅಭ್ಯರ್ಥಿ ಗೆದ್ದಿಲ್ಲ ಎಂದು ಕೇಳಿ ದುಃಖವಾಗಿದೆ. ಆದರೆ ಈ ಬಾರಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಗಂಗಾಧರ ನಾಯಕ, ಬಸವನಗೌಡ ಬ್ಯಾಗವಾಟ್, ರೈತ ಮೊರ್ಚದ ರಾಜ್ಯಾದ್ಯಕ್ಷ ಜೆ.ಶರಣಪ್ಪಗೌಡ, ಜೆ.ದೇವರಾಜಗೌಡ, ಬಿಜೆಪಿ ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ ಕುಲಕರ್ಣಿ,ಶಿವಶರಣಗೌಡ ಲಕ್ಕಂದಿನ್ನಿ, ಶರಣ್ಣಪ್ಪ ನಕ್ಕುಂದಿ, ತಿಮ್ಮಾರೆಡ್ಡಿ ಬೊಗಾವತಿ, ನಾಗನಗೌಡ ಅತ್ತನೂರು,ಎಂ.ನಾಗರಾಜಗೌಡ, ಅರುಣಕುಮಾರ ಬಲ್ಲಟಗಿ,ರಮೇಶ ಚಿಂಚರಕಿ, ತಾ.ಪಂ ಮಾಜಿ ಸದಸ್ಯ ಸಿದ್ದಯ್ಯಸ್ವಾಮಿ,ಹೆಚ್.ಕೆ.ಅಮರೇಶ, ಪ.ಪಂ ಸದಸ್ಯರಾದ ಕೃಷ್ಣನಾಯಕ,ಅಜೀತ್ ಹೊನ್ನಟಗಿ,ಜೆ.ಬಸವರಾಜಗೌಡ, ರಾಜು ನಾಯಕ, ವಿನಾಯಕ, ಶರಣಗೌಡ ಶಾಖಾಪೂರು, ಹನುಮಂತರಾಯ ಅತ್ತನೂರು, ಈರಣ್ಣ ನಾಯಕ ಗಣದಿನ್ನಿ, ಉಮೇಶಜೇಗರಕಲ್,ಶಿವನಗೌಡ, ಯಲ್ಲನಗೌಡ, ವಿರೇಶ, ಸುರೇಶಗೌಡ ನವಲಕಲ್, ರಾಜಪ್ಪ ಹೊನ್ನಟಗಿ, ರಾಮಯ್ಯ, ವಾಹೀದ್, ಸುಭಾಷ್ ಚಾಗಭಾವಿ, ಸೇರಿದಂತೆ ಇನ್ನಿತರರು ಇದ್ದರು.