ದಾವಣಗೆರೆ.ಮಾ.೨೬; ಇಡೀ ಜಗತ್ತೇ ಭಾರತದ ಕಡೆ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮ ಸಮಾರೋಪ ಸಮಾರೋಪದಲ್ಲಿ ಮಾತನಾಡಿದ ಅವರುಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ದು, ಇನ್ನೂ ೪೦-೫೦ ಸಾವಿರ ಜನ ಒಳಗೆ ಬರಲಾಗದೆ ಹೊರಗಿದ್ದಾರೆ. ದಾವಣಗೆರೆಯಲ್ಲಿ ಎಲ್ಲರ ಪರಿಶ್ರಮದಿಂದ ಅಪರೂಪದ ಅದ್ಭುತ ಕಾರ್ಯಕ್ರಮ ಆಯೋಜನೆಯಾಗಿದೆ. ದಾವಣಗೆರೆ ಇತಿಹಾಸದಲ್ಲಿ ಎಂದೂ ಮರೆಯಲಾಗದ ಅದ್ಭುತ ಕಾರ್ಯಕ್ರಮ. ಕಳೆದ ೮ ವರ್ಷದಲ್ಲಿ ಮೋದಿ ಒಂದು ದಿನ ವಿಶ್ರಾಂತಿ ಇಲ್ಲದೆ ದೇಶ-ವಿದೇಶಗಳನ್ನು ಸುತ್ತಾಡಿ ದೇಶಕ್ಕೆ ಕೆಲಸ ಮಾಡಿದ್ದಾರೆ. ಇನ್ನೆರೆಡು ತಿಂಗಳು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಪೂರ್ಣ ಸಮಯ ಕೊಡಿ. ಹಣ ಬಲ, ತೋಳ್ಬಲ, ಜಾತಿ ಬಲದಿಂದ ಅಧಿಕಾರಕ್ಕೆ ಬರುವ ಕಾಲ ಹೋಗಿದೆ. ಕರ್ನಾಟಕದ ಜನ ನರೇಂದ್ರ ಮೋದಿ ಕಡೆ ನೋಡುತ್ತಿರುವ ಕಾಲದಲ್ಲಿ ಮನೆ-ಮನೆಗೆ ಹೋಗಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ಸಾಧನೆ ತಿಳಿಸಿ ಜನರ ಮನ ಗೆಲ್ಲುವ ಕೆಲಸ ಮಾಡಿದರೆ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.ಇದು ಸಮಾರೋಪ ಸಮಾರಂಭ ಅಲ್ಲ. ವಿಜಯ ಯಾತ್ರೆಯ ಆರಂಭ. ಅಭೂತಪೂರ್ವ ಜನಬೆಂಬಲದೊಂದಿಗೆ ರಾಜ್ಯದ ಮೂಲೆ-ಮೂಲೆ ತಲುಪಿದೆ. ಒಂದು ಕ್ಷೇತ್ರ ಹಿಡಿದುಕೊಳ್ಳಲಾಗದ ವಿರೋಧ ಪಕ್ಷದವರು ೭೦ ವರ್ಷ ಕಡುಬು ತಿಂತಿದ್ದಿರಾ? ಈಗ ಗ್ಯಾರಂಟಿ ಕಾರ್ಡ್ ನೀಡಲು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯಚಂದ್ರರಷ್ಟೇ ಸತ್ಯ. ಸುಳ್ಳು ಭರವಸೆ, ಎಲ್ಲ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ಸಿನವರದ್ದು ಬರೀ ಭರವಸೆ. ಅಧಿಕಾರದಲ್ಲಿದ್ದಾಗ ಏನೂ ಮಾಡದೆ ಈಗ ಸುಳ್ಳು ಭರವಸೆ ನೀಡುತ್ತಿದ್ದಾರೆ. ಪರಿಶಿಷ್ಟರು, ಹಿಂದುಳಿದ ವರ್ಗದವರಿಗೆ ಬಿಜೆಪಿ ನೀಡಿರುವ ಕೊಡುಗೆಗಳನ್ನು ಜನರಿಗೆ ತಿಳಿಸುವ ಮೂಲಕ ಜನರನ್ನು ತಲುಪಬೇಕು ಎಂದರು.