ರಾಜ್ಯದಲ್ಲಿ ಬಿಜೆಪಿ ಅಧಿಕಾರ ಖಚಿತ

ಬೇತಮಂಗಲ: ಗ್ರಾಮದ ಹೊಸ ಬಡಾವಣೆಯ ೭ನೇ ಬ್ಲಾಕ್‌ನಲ್ಲಿ ಸ್ಥಳೀಯ ಮುಖಂಡರೊಂದಿಗೆ ಬಿಜೆಪಿ ಪಕ್ಷದ ಅಭ್ಯರ್ಥಿ ಅಶ್ವಿನಿ ಸಂಪಂಗಿ ಮನೆ-ಮನೆಗೂ ತೆರಳಿ ಮತಯಾಚನೆ ಮಾಡಿದರು.
ಬೇತಮಂಗಲ ಗ್ರಾಮದಲ್ಲಿ ೨೦೦೮ರಲ್ಲಿ ಸಾಸಕರಾಗಿದ್ದ ವೈ.ಸಂಪಂಗಿ ಹಾಗೂ ೨೦೧೩ರಲ್ಲಿ ಶಾಸಕರಾಗಿದ್ದ ವೈ.ರಾಮಕ್ಕ ಅವರ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇ ಕಣ್ಣು ಮುಂದೆ ಇವೆ ಎಂದು ಮತದಾರರಿಗೆ ತಿಳಿಸುತ್ತಾ ಮತಯಾಚನೆ ಮಾಡಿದರು.
ಈ ವೇಳೆ ಅಭ್ಯರ್ಥಿ ಅಶ್ವಿನಿ ಸಂಪಂಗಿ ಮಾತನಾಡಿ. ಕೆಜಿಎಫ್ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಶಾಸಕರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರಿಗಾಗಿ ಒಳ್ಳೆಯ ಆಡಳಿತ ನೀಡುತ್ತಿದೆ ಎಂದರು.
ಮುಂದಿನ ದಿನಗಳಲ್ಲಿಯೂ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ತರಲು ಸಹಕಾರಿಯಾಗುತ್ತದೆ, ತಾಲ್ಲೂಕಿನ ಜನತೆ ಅಶೀರ್ವಾದ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಮತ ಗಣೇಶ್, ತಾಪಂ ಸದಸ್ಯ ಡಾ.ಕೃಷ್ಣಮೂರ್ತಿ, ಗ್ರಾಪಂ ಸದಸ್ಯರಾದ ಡೈರಿ ಅನಂದ್, ಓಂ ಸುರೇಶ್, ಶೇಷಾದ್ರಿ, ರಾಧಮ್ಮ ಉದಯ್ ಕುಮಾರ್, ಗಂಗಮ್ಮ ಕೊಂಡಪ್ಪ, ಮುಕಂಡರಾದ ಅಪ್ಪಿ, ಅಕಿಲ್ ಪಾಷ, ಮಂಜುನಾಥ್, ರವಿ, ಸುಬ್ಬು, ಯುವ ಮೋರ್ಚಾ ಅರುಣ್, ಸತೀಶ್, ವಿನಯ್, ವರುಣ್, ಸಂಜೀವ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.