ರಾಜ್ಯದಲ್ಲಿ ಫಂಗಸ್ ಔಷಧಿ ಕೊರತೆ ಬಹಿರಂಗ: ಸೂಕ್ತ ಕ್ರಮಕ್ಕೆ ಎಚ್ ಡಿಕೆ ಆಗ್ರಹ

The Chief Minister of Karnataka, Shri H.D. Kumaraswamy meeting the Union Minister for Consumer Affairs, Food and Public Distribution, Shri Ram Vilas Paswan, in New Delhi on October 06, 2018.

ಬೆಂಗಳೂರು, ಮೇ 16-ರಾಜ್ಯದಲ್ಲಿಬ್ಲ್ಯಾಕ್ ಫಂಗಸ್ ಔಷಧದ ಕೊರತೆ ಎದುರಿಸುತ್ತಿರುವ ವಿಷಯ ಬಹಿರಂಗವಾಗಿದೆ ಎಂದು ಮಾಜಿ ಮುಖ್ಯಮಂತ್ರಿಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕಪ್ಪು ಶಿಲೀಂಧ್ರದ ಸಮಸ್ಯೆಯು ಪಿಡುಗಾಗಿ, ಮಹಾಮಾರಿಯಾಗಿ ಕಾಡುವ ಆತಂಕವನ್ನು ಜನರ ಮುಂದೊಡ್ಡಿದೆ. ಅದರ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ಕೊರತೆಯನ್ನು ಕರ್ನಾಟಕ ಎದುರಿಸುತ್ತಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಔಷಧದ 1,050 ವಾಯ್ಲ್‌ಗಳು ಮಾತ್ರ ಇವೆ ಎಂಬ ಆಘಾತಕಾರಿ ಅಂಶವು ಭಯ ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಅಗತ್ಯ ಪ್ರಮಾಣದ ಔಷಧಗಳನ್ನು ತರಿಸಿಕೊಳ್ಳುವುದರತ್ತ ಗಮನಹರಿಸಬೇಕು.ಇಲ್ಲವಾದಲ್ಲಿ ಮತ್ತೊಂದು ಭೀಕರತೆಗೆ ಜನ ಸಿಲುಕುವ ಅಪಾಯವಿದೆ ಎಂದು ಕುಮಾರಸ್ವಾಮಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.