ರಾಜ್ಯದಲ್ಲಿ ನಿಲ್ಲದ ಕೊರೊನಾ ಅಬ್ಬರ 41,990 ಮಂದಿಗೆ ಸೋಂಕು, 271 ಜನರ ಸಾವು

ಬೆಂಗಳೂರು, ಮೇ,1- ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಅಬ್ಬರ ಮುಂದುವರಿದಿದೆ.
ಇಂದು ಒಂದೇ ದಿನ 41,990 ಮಂದಿ ಸೋಂಕು ತಗುಲಿದ್ದು ತೀವ್ರ ಆತಂಕ ಸೃಷ್ಟಿಸಿದೆ.ಒಂದೇ ದಿನ 271 ಜನರು ಸಾವಿಗೀಡಾಗಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 15794 ಕ್ಜೆ ಏರಿದೆ. ಇಂದು ಸಾವಿನ ಸಂಖ್ಯೆ 300ರ ಆಸುಪಾಸಿಗೆ ಬಂದಿದೆ.
ಇಂದು ಬೆಂಗಳೂರಿನಲ್ಲಿ 162 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ನಗರದಲ್ಲಿ ಸೋಂಕಿತರ ಸಂಖ್ಯೆ 19353ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಆಸ್ಪತ್ರೆಯಿಂದ ಇಂದು 18341 ಮಂದಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು 1143259 ಮಂದಿ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ 405068 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ ಅಂಶ ನೀಡಿದೆ.
1564132 ಒಟ್ಟು ಖಚಿತ ಪ್ರಕರಣಗಳಿವೆ. ಶೇ.23.03 ಖಚಿತ ಪ್ರಕರಣಗಳಿದ್ದು, ಮೃತರ ಪ್ರಮಾಣ ಶೇ.0.66ರಷ್ಟಿದೆ.
ಬುಲೆಟಿನ್ ಪ್ರಕಾರ, ಬಾಗಲಕೋಟೆ 319, ಬಳ್ಳಾರಿ 1163, ಬೆಳಗಾವಿ 532, ಬೆಂಗಳೂರು ಗ್ರಾಮಾಂತರ 943, ಬೆಂಗಳೂರು ನಗರ 19353, ಬೀದರ್ 360, ಚಾಮರಾಜನಗರ 548, ಚಿಕ್ಕಬಳ್ಳಾಪುರ 820, ಚಿಕ್ಕಮಗಳೂರು 500, ಚಿತ್ರದುರ್ಗ 103, ದಕ್ಷಿಣ ಕನ್ನಡ 933, ದಾವಣಗೆರೆ 386, ಧಾರವಾಡ 540, ಗದಗ 205, ಹಾಸನ 790, ಹಾವೇರಿ 168, ಕಲಬುರಗಿ 1407 ಕೊಡಗು 590, ಕೋಲಾರ 440, ಕೊಪ್ಪಳ 1,019, ಮಂಡ್ಯ 1235, ಮೈಸೂರು 2529, ರಾಯಚೂರು 601, ರಾಮನಗರ 577, ಶಿವಮೊಗ್ಗ 661, ತುಮಕೂರು 2,038, ಉಡುಪಿ 670, ಉತ್ತರ ಕನ್ನಡ 687, ವಿಜಯಪುರ 340 ಮತ್ತು ಯಾದಗಿರಿಯಲ್ಲಿ 266 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.