ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ : ಅರುಣ್ ಸಿಂಗ್

ಬೆಂಗಳೂರು ಜ.3ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ
ಶಿವಮೊಗ್ಗದಲ್ಲಿ ಇಂದು ನಡೆದ ರಾಜ್ಯ ಬಿಜೆಪಿಯ ವಿಶೇಷ ಸಭೆಯ ಸಮಾರೋಪ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರೇ ಸುಪ್ರೀಂ, ಸಂಪುಟ ವಿಸ್ತರಣೆಯು ಬಗ್ಗೆಯೂ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು ಸಚಿವ ಸಂಪುಟ ವಿಸ್ತರಣೆ ಪುನರ್ರಚನೆ ಎಲ್ಲವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ ಅವರೇ ಎಲ್ಲವನ್ನು ನಿರ್ಧರಿಸುತ್ತಾರೆಎಂದು ಅವರು ಹೇಳಿದರು
ಸಂಪುಟ ವಿಸ್ತರಣೆ ಬಗ್ಗೆ ಇಂದು ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮಾತನಾಡಲು ಶಾಸಕ ಯತ್ನಾಳ್ ಯಾರು ಎಂದ ಅವರು ಹೂ ಇಸ್ ಈ ಎಂದು ಯತ್ನಾಳ್ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಅರುಣ್ ಸಿಂಗ್ ಗರಂ ಆದರು