ರಾಜ್ಯದಲ್ಲಿ ತಾಪಮಾನ ಏರಿಕೆ

ಬೆಂಗಳೂರು, ಆಗಸ್ಟ್ ೧೬- ಒಂದು ವಾರದಿಂದ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಬಹುತೇಕ ಕಡೆ ಗರಿಷ್ಠ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ.
ಕರಾವಳಿಯ ಮಲೆನಾಡು ಮತ್ತು ಘಟ್ಟ ಪ್ರದೇಶಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಬೆಳಿಗ್ಗೆ ೯ ಗಂಟೆಯ ನಂತರದ ಬಿಸಿಲಿನ ಬೇಗೆಗೆ ಜನ ಬಸವಳಿದ ಹೋಗಿದ್ದಾರೆ.
ದಕ್ಷಿಣ ಕನ್ನಡ ಶೇ.೨೪, ಉಡುಪಿ ಶೇ.೧೯, ಉತ್ತರ ಕನ್ನಡ ಶೇ.೮ ಮಳೆ ಕೊರತೆ. ಒಟ್ಟಾರೆ ರಾಜ್ಯದಲ್ಲಿ ಶೇ.೧೪ರಷ್ಟು ಮಳೆ ಕೊರತೆಯಾಗಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರಾಜಧಾನಿಯಲ್ಲಿ ಈ ಬಾರಿ ಭಾರೀ ಮಳೆ ಕೈಕೊಟ್ಟಿದೆ ಎಂದು ಬೆಂಗಳೂರಿನ ನಿವಾಸಿಗಳ ಹೇಳಿಕೆ.ರಾಜಧಾನಿಯಲ್ಲಿ ಮಳೆ ಕಾಣದೆ ಜನರು ತಳಮಳಿಸುತ್ತಿದ್ದಾರೆ.
ಉತ್ತರ ಒಳಭಾಗದಲ್ಲಿ ಸಹ ತಾಪಮಾನ ಹೆಚ್ಚುತ್ತಿದೆ. ಅಚ್ಚರಿ ಎಂದರೆ ಕೆಲವೆಡೆ ದಿಢೀರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಈ ತಿಂಗಳ ಅಂತ್ಯದ ವೇಳೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಜನರು ಎಚ್ಚರಿಕೆಯಿಂದ ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯಪುರದಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.