ರಾಜ್ಯದಲ್ಲಿ ಚಳಿ, ಬಿಸಿಲಿನ ಅಬ್ಬರ

ಬೆಂಗಳೂರು, ನ ೧೮- ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಒಂದೆಡೆ ಮೈಕೊರೆಯುವ ಚಳಿ ಹೆಚ್ಚಳವಾದರೇ, ಮಧ್ಯಾಹ್ನದ ಹೊತ್ತು ರಣಬಿಸಿಲಿನ ಆರ್ಭಟ ಕೂಡ ಜೋರಾಗಿದೆ.
ಕರಾವಳಿ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಡೆ ತಾಪಮಾನದಲ್ಲಿ ಭಾರಿ ಇಳಿಕೆ ದಾಖಲಾಗುತ್ತಿದೆ. ಬೆಳ್ಳಿಗೆ ತೇವಾಂಶ ಹೆಚ್ಚಿರುವುದೇ ಚಳಿ ಹೆಚ್ಚಲು ಕಾರಣ. ವಾಡಿಕೆಯ ಪ್ರಕಾರ ನವೆಂಬರ್‌ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗೆ ರಾಜ್ಯದಲ್ಲಿ ಚಳಿ ಹೆಚ್ಚು ತೀಕ್ಷ್ಣವಾಗಿರುತ್ತದೆ. ಆದರೆ ಈ ಬಾರಿ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತ, ಉತ್ತರ ಮತ್ತು ಈಶಾನ್ಯ ದಿಕ್ಕಿನಿಂದ ರಾಜ್ಯದತ್ತ ಬೀಸುತ್ತಿರುವ ಗಾಳಿ ಹಾಗೂ ಗಾಳಿಯಲ್ಲಿನ ತೇವಾಂಶದ ಕಾರಣದಿಂದ ನವೆಂಬರ್‌ಎರಡನೇ ವಾರದಿಂದಲೇ ಮೈ ಕೊರೆಯುವ ಚಳಿ ಶುರುವಾಗಿದೆ.
ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಮುಂಜಾನೆ ಚಳಿ ಆವರಿಸಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ. ಶಿವಮೊಗ್ಗ, ಮಡಿಕೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಮುಂಜಾನೆ ಚಳಿ ಆವರಿಸಲಿದ್ದು, ಸಂಜೆ ವೇಳೆಗೆ ತಂಪಾದ ವಾತಾವಾರಣ ಇರಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಜನರಿಗೆ ಇಂದು ತಂಪಾದ ವಾತಾವರಣ ಜೊತೆಗೆ ಮಧ್ಯಾಹ್ನದ ಹೊತ್ತು ಬಿಸಿಲು ಅಧಿಕವಾಗಿರಲಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲೆಡೆ ತೇವಾಂಶ ಹೆಚ್ಚಿರುವುದು ಚಳಿ ಹೆಚ್ಚಾಗಲು ಕಾಣವಾಗಿದೆ.
ಬೆಂಗಳೂರು: ೨೭-೧೪, ಮಂಗಳೂರು: ೩೨-೨೨, ರಾಯಚೂರು: ೩೧-೧೬, ಯಾದಗಿರಿ: ೩೧-೧೬, ವಿಜಯಪುರ: ೩೧-೧೬, ಬೀದರ್: ೨೮-೧೪, ಕಲಬುರಗಿ: ೩೧-೧೬, ಬಾಗಲಕೋಟೆ: ೩೧-೧೬, ಶಿವಮೊಗ್ಗ: ೩೧-೧೫, ಬೆಳಗಾವಿ: ೩೦-೧೪, ಮೈಸೂರು: ೨೮-೧೪, ಮಂಡ್ಯ: ೨೮-೧೪ ತಾಪಮಾನ ದಾಖಲಾಗಿದೆ.