ರಾಜ್ಯದಲ್ಲಿ ಕೋವಿಡ್ ಚೇತರಿಕೆ ಹೆಚ್ಚಳ

ಬೆಂಗಳೂರು, ಸೆ 22-ರಾಜ್ಯದಲ್ಲಿ ಕೋವಿಡ್‌ ಚೇತರಿಕೆಯ ಪ್ರಮಾಣ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 9073ಮಂದಿ ಗುಣಮುಖರಾಗಿದ್ದಾರೆ.
ಇಂದು ಒಂದು ದಿನದಲ್ಲಿ 6974 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, , 9073ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದಾರೆ. ಹಾಗೂ 83 ಸೋಂಕಿತರು ಇಂದು ಮಹಾಮಾರಿಯಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 5,33850ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೀಗ ಒಟ್ಟು 4,32450 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 93153ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 8228 ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 822 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರು ನಲ್ಲಿ ಸೊಂಕಿತರ ಸಂಖ್ಯೆ2ಲಕ್ಷದಾಟಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 3,082ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 200728ಕ್ಕೆ ಏರಿಕೆಯಾಗಿದೆ. 26 ಮಂದಿ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 2715ಕ್ಕೆ ಏರಿಕೆಯಾಗಿದೆ. ಇಂದು4145 ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ 39983 ಸಕ್ರಿಯ ಪ್ರಕರಣಗಳಿವೆ
ಜಿಲ್ಲಾ ವಾರು ಸೊಂಕಿತರ ವಿವರ
ಬಾಗಲಕೋಟೆ 77ಬಳ್ಳಾರಿ 181 ಬೆಳಗಾವಿ 179ಬೆಂಗಳೂರು ಗ್ರಾಮಾಂತರ 80 , ಬೀದರ್50 ಚಾಮರಾಜನಗರ 57 ಚಿಕ್ಕಬಳ್ಳಾಪುರ 71 ಚಿಕ್ಕಮಗಳೂರು 77 ಚಿತ್ರದುರ್ಗ122ದಕ್ಷಿಣ ಕನ್ನಡ 211ದಾವಣಗೆರೆ 198ಧಾರವಾಡ 37 ಗದಗ 134 ಹಾಸನ 235 ಹಾವೇರಿ 115 ಕಲಬುರಗಿ 168 ಕೊಡಗು 73 ಕೋಲಾರ 52 ಕೊಪ್ಪಳ 180ಮಂಡ್ಯ 134ಮೈಸೂರು 443ರಾಯಚೂರು 115ರಾಮನಗರ 33ಶಿವಮೊಗ್ಗ 234ತುಮಕೂರು 240ಉಡುಪಿ 106ಉತ್ತರ ಕನ್ನಡ 155 ವಿಜಯಪುರ 80 ಯಾದಗಿರಿ 55