ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಏರಿಕೆ: ಹೆಚ್ಚಿದ ಆತಂಕ

ಬೆಂಗಳೂರು, ಡಿ.3-ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ನಡುವೆಯೇ ದಿನದಿಂದ ಕೊರೊನಾ ಸೋಂಕು ಸಂಖ್ಯೆ ಮತ್ತಷ್ಟು ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಇಂದು 413 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 4 ಸೋಂಕಿತರು ಸಾವನ್ನಪ್ಪಿದ್ದು. ಈ ಅವಧಿಯಲ್ಲಿ 256 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜ್ಯದ ಬಾಗಲಕೋಟೆ,ಬೀದರ್ , ಗದಗ,ಕೊಡಗು, ಕೋಲಾರ,ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಖ್ಯೆ ಪತ್ತೆಯಾಗಿಲ್ಲ.

ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು 212 ಮಂದಿಗೆ ಇಳಿಕೆಯಾಗಿದೆ. 185 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.ಇಂದು 2 ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ‌ 29,97,246 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,52,101 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,220 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 6,896 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.0.39 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.96 ರಷ್ಟು ಇದೆ.

1,05ಲಕ್ಷ ಮಂದಿಗೆ ಪರೀಕ್ಷೆ:

ರಾಜ್ಯದಲ್ಲಿ ಇಂದು 1,05,879 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,36,03,765 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

 • ಬಾಗಲಕೋಟೆ- 0
 • ಬಳ್ಳಾರಿ – 1
 • ಬೆಳಗಾವಿ – 2
 • ಬೆಂಗಳೂರು ಗ್ರಾಮಾಂತರ- 5
 • ಬೆಂಗಳೂರು ನಗರ. – 212
 • ಬೀದರ್ 0
 • ಚಾಮರಾಜನಗರ- 3
 • ಚಿಕ್ಕಬಳ್ಳಾಪುರ- 1
 • ಚಿಕ್ಕಮಗಳೂರು- 2
 • ಚಿತ್ರದುರ್ಗ- 2
 • ದಕ್ಷಿಣ ಕನ್ನಡ – 10
 • ದಾವಣಗೆರೆ- 18
 • ಧಾರವಾಡ- 0
 • ಗದಗ- 0
 • ಹಾಸನ- 11
 • ಹಾವೇರಿ- 8
 • ಕಲಬುರಗಿ- 1
 • ಕೊಡಗು- 0
 • ಕೋಲಾರ- 0
 • ಕೊಪ್ಪಳ- 0
 • ಮಂಡ್ಯ- 2
 • ಮೈಸೂರು- 45
 • ರಾಯಚೂರು- 0
 • ರಾಮನಗರ – 0
 • ಶಿವಮೊಗ್ಗ- 33
 • ತುಮಕೂರು- 30
 • ಉಡುಪಿ- 19
 • ಉತ್ತರ ಕನ್ನಡ- 6
 • ವಿಜಯಪುರ – 0
 • ಯಾದಗಿರಿ- 0