ರಾಜ್ಯದಲ್ಲಿ ಕೊರೋನಾ ದಾಖಲೆ: ಒಂದೇ ದಿನದಲ್ಲಿ ಹತ್ತು ಸಾವಿರ ಗಡಿ ದಾಟಿದ ಸೋಂಕು

ಬೆಂಗಳೂರು, ಏ. 11- ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಇಂದು  ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ 10 ಸಾವಿರ ಗಡಿ ದಾಟಿದೆ. ಹಾಗೆಯೇ ಸಾವನ್ನಪ್ಪುವವರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ ಕಳೆದ 24 ಗಂಟೆಗಳಲ್ಲಿ 40 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 7,584 ಜನರಲ್ಲಿ ಸೋಂಕು ಪತ್ತೆಯಾಗಿವೆ.
ರಾಜ್ಯದಲ್ಲಿ ಬರೋಬ್ಬರಿ 10,250 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 10,65,290ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 40 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,889ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 7,584 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,81,982ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ 27 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು 2,638 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 9,83,157ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 69,225 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 440 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರ ದಲ್ಲಿ27 ಮಂದಿ ಮೃತಪಟ್ಟಿದ್ದಾರೆ ಬೆಳಗಾವಿ ಮೈಸೂರು ನಗರದಲ್ಲಿ ಮೂವರು ಕೊರೋನಾ ಕಾರಣದಿಂದ ಸಾವನ್ನಪ್ಪಿದ್ದಾರೆ. ಹಾಗೆಯೇ ಕಲ್ಬುರ್ಗಿಯಲ್ಲಿ ಇಬ್ಬರು , ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೀದರ್ ,ಶಿವಮೊಗ್ಗ ವಿಜಯಪುರ, ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ1184 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ425930 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟ51236 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 46, ಬಳ್ಳಾರಿ 103, ಬೆಳಗಾವಿ 74, ಬೆಂಗಳೂರು ಗ್ರಾಮಾಂತರ 117, ಬೀದರ್ 290, ಚಾಮರಾಜನಗರ 49, ಚಿಕ್ಕಬಳ್ಳಾಪುರ 64, ಚಿಕ್ಕಮಗಳೂರು 41, ಚಿತ್ರದುರ್ಗ 33, ದಕ್ಷಿಣ ಕನ್ನಡ 133, ದಾವಣಗೆರೆ 50, ಧಾರವಾಡ 150, ಗದಗ 19, ಹಾಸನ 170, ಹಾವೇರಿ 22, ಕಲಬುರಗಿ 291, ಕೊಡಗು 39, ಕೋಲಾರ 41, ಕೊಪ್ಪಳ 32, ಮಂಡ್ಯ 51, ಮೈಸೂರು 277, ರಾಯಚೂರು 103, ರಾಮನಗರ 33, ಶಿವಮೊಗ್ಗ 39, ತುಮಕೂರು 150, ಉಡುಪಿ 75, ಉತ್ತರ ಕನ್ನಡ 73, ವಿಜಯಪುರ 63, ಯಾದಗಿರಿ 38.