ರಾಜ್ಯದಲ್ಲಿ ಕೊರೋನಾ ದಾಖಲೆ: ಒಂದೇ ದಿನದಲ್ಲಿ 11 ಸಾವಿರ ಗಡಿ ದಾಟಿದ ಸೋಂಕು

ಬೆಂಗಳೂರು, ಏ.14- ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಇಂದು  ಸೋಂಕು ಪ್ರಕರಣಗಳು ಒಂದೇ ದಿನದಲ್ಲಿ 11 ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿ ಇಂದು11265 ಜನರಿಗೆ ಸೋಂಕು ತಗುಲಿದೆ ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ1094912 ಏರಿಕೆಯಾಗಿದೆ 24 ಗಂಟೆಗಳಲ್ಲಿ 38ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 8155 ಜನರಲ್ಲಿ ಸೋಂಕು ಪತ್ತೆಯಾಗಿವೆ.
. ರಾಜ್ಯದಲ್ಲಿ ಇಂದು 4364 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 996367ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 85,480ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 506 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 38ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13046ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ 23 ಮಂದಿ ಸೋಂಕಿತರು, ಮೈಸೂರು ನಗರದಲ್ಲಿ ಐವರು ಕಲಬುರಗಿ ಮತ್ತು ಧಾರವಾಡದಲ್ಲಿ ತಲಾ ಮೂವರು ಕೊರೋನಾ ಕಾರಣದಿಂದ ಸಾವನ್ನಪ್ಪಿದ್ದಾರೆ. ಹಾಗೆಯೇ ಬೀದರ್ ನಲ್ಲಿ ಇಬ್ಬರು ಬಳ್ಳಾರಿ ಮತ್ತು ತುಮಕೂರಿನ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಇಂದು 8155 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 5,02,024ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 23 ಮಂದಿ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲ2540 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ433923 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟ63167 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 68, ಬಳ್ಳಾರಿ 159, ಬೆಳಗಾವಿ 107, ಬೆಂಗಳೂರು ಗ್ರಾಮಾಂತರ48, ಬೀದರ್ 290, ಚಾಮರಾಜನಗರ 72, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 42, ಚಿತ್ರದುರ್ಗ 17, ದಕ್ಷಿಣ ಕನ್ನಡ 140,ದಾವಣಗೆರೆ 34,ಧಾರವಾಡ 127,ಗದಗ 25,ಹಾಸನ132,ಹಾವೇರಿ 44, ಕಲಬುರಗಿ376,ಕೊಡಗು 23,ಕೋಲಾರ 116,,ಕೊಪ್ಪಳ 37,ಮಂಡ್ಯ 85,,ಮೈಸೂರು 356, ರಾಯಚೂರು 65, ರಾಮನಗರ 35, ಶಿವಮೊಗ್ಗ 92, ತುಮಕೂರು 245, ಉಡುಪಿ 110, ಉತ್ತರ ಕನ್ನಡ41, ವಿಜಯಪುರ 122, ಯಾದಗಿರಿ 58.