ರಾಜ್ಯದಲ್ಲಿ ಕೊರೋನಾ ತುಸು ಏರಿಕೆ: ನಿಲ್ಲದ ಆತಂಕ

ಬೆಂಗಳೂರು, ಜೂ.9- ರಾಜ್ಯದಲ್ಲಿ ನಿನ್ನೆ 10 ಸಾವಿರಕ್ಕಿಂತ ಕಡಿಮೆ ದೃಢಪಟ್ಟಿದ್ದ ಕೊರೊನಾ ಸೋಂಕು ಸಂಖ್ಯೆ ಇಂದು ತುಸು ಏರಿಕೆಯಾಗಿದೆ. ಈ ಮೂಲಕ ಮತ್ತೆ ಆತಂಕ ಹೆಚ್ಚು ಮಾಡಿದೆ.

ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿಗಿಂತ ಚೇತರಿಕೆ ಪ್ರಮಾಣ ದ್ವಿಗುಣವಾಗಿರುವುದು ಸೇರಿದಂತೆ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚೇತರಿಕೆ ಪ್ರಮಾಣ ಹೆಚ್ಚಾಗಿದೆ ಹೀಗಾಗಿ ಒಟ್ಟಾರೆ ಪಾಸಿಟಿವಿಟಿ ಪ್ರಮಾಣ ಶೇಕಡ 6.68 ರಷ್ಟಿದೆ

ರಾಜ್ಯದಲ್ಲಿ ಇಂದು ಹೊಸದಾಗಿ 10,959 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 192 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಸೋಂಕಿನಿಂದ 20,246 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ಇಂದು ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ರಾಜ್ಯದಲ್ಲಿ ಇನ್ನೂವರೆಗೆ ಒಟ್ಟಾರೆ ಸೋಂಕಿನ ಸಂಖ್ಯೆ 27,28,248ಕ್ಕೆ ಏರಿಕೆಯಾಗಿದೆ ಜೊತೆಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 24,80,411ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಇಲ್ಲಿಯತನಕ ರಾಜ್ಯದಲ್ಲಿ 32,291 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಎಂದು 1,63, 962 ಗಂಟೆಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 3,10,26,189 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ

ಜಿಲ್ಲೆ ಎಷ್ಟು

 • ಬಾಗಲಕೋಟೆ- 96
 • ಬಳ್ಳಾರಿ – 211
 • ಬೆಳಗಾವಿ – 341
 • ಬೆಂಗಳೂರು ಗ್ರಾಮಾಂತರ- 385
 • ಬೆಂಗಳೂರು ನಗರ. – 2,395
 • ಬೀದರ್ 9
 • ಚಾಮರಾಜನಗರ- 254
 • ಚಿಕ್ಕಬಳ್ಳಾಪುರ- 268
 • ಚಿಕ್ಕಮಗಳೂರು- 339
 • ಚಿತ್ರದುರ್ಗ- 200
 • ದಕ್ಷಿಣ ಕನ್ನಡ – 609
 • ದಾವಣಗೆರೆ- 594
 • ಧಾರವಾಡ- 227
 • ಗದಗ- 95
 • ಹಾಸನ- 745
 • ಹಾವೇರಿ- 97
 • ಕಲಬುರಗಿ- 48
 • ಕೊಡಗು- 216
 • ಕೋಲಾರ- 239
 • ಕೊಪ್ಪಳ- 157
 • ಮಂಡ್ಯ- 397
 • ಮೈಸೂರು- 1163
 • ರಾಯಚೂರು- 20
 • ರಾಮನಗರ – 50
 • ಶಿವಮೊಗ್ಗ- 562
 • ತುಮಕೂರು- 662
 • ಉಡುಪಿ- 413
 • ಉತ್ತರ ಕನ್ನಡ- 312
 • ವಿಜಯಪುರ – 158
 • ಯಾದಗಿರಿ- 31