ರಾಜ್ಯದಲ್ಲಿ ಕೊರೋನಾ ಅಬ್ಬರ: ಒಂದೇ ದಿನದಲ್ಲಿ 23 ಸಾವಿರಕ್ಕೂ ಹೆಚ್ಚುಮಂದಿಗೆಸೋಂಕು, 116ಸಾವು

ಬೆಂಗಳೂರು, ಏ.21- ರಾಜ್ಯದಲ್ಲಿ ಕರೋನವೈರಸ್ ಆರ್ಭಟ ಎಲ್ಲಾ ಮಿತಿಗಳನ್ನು ಮೀರಿದ್ದು ಒಂದೇ ದಿನದಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಕೊರೋನಾ ಕಾಣಿಸಿಕೊಂಡ ನಂತರ ಒಂದೇ ದಿನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿರುವುದು ರಾಜ್ಯದ ಮಟ್ಟಿಗೆ ದಾಖಲೆ.
ಪ್ರತಿದಿನ ಸೋಂಕು ಏರುತ್ತಲೇ ಇದೆ ಎಲ್ಲಾ ದಾಖಲೆಗಳನ್ನು ಅಳಿಸು ಹಾಕುವಂತೆ ಸೋಂಕಿತರ ಸಂಖ್ಯೆ ಸಾವಿರಗಟ್ಟಲೆ ಏರುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ಹೇಳತೀರದಾಗಿದೆ ಸೋಂಕಿನ ಈ ಪರಿ ಆರ್ಭಟ ಜನರಲ್ಲಿ ಆತಂಕ ಉಂಟು ಮಾಡಿದೆ.
ಸೋಂಕು ಮಿತಿ ಮೀರಿದ್ದರೂ ಸಾವಿನ ಸಂಖ್ಯೆಯಲ್ಲಿ ಇಂದು ಇಳಿಮುಖವಾಗಿರುವುದು ತುಸು ನೆಮ್ಮದಿ ಮೂಡಿಸಿದೆ. ರಾಜ್ಯದಲ್ಲಿ ಕಳೆದ24 ಗಂಟೆಗಳಲ್ಲಿ 116 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 13ಸಾವಿರಕ್ಕು ಹೆಚ್ಚು ಮಂದಿಗೆ ಸೋಂಕು ತಗುಲಿದೆ.
ಬೆಂಗಳೂರು ನಗರ ಒಂದರಲ್ಲೇ ಇಂದು 70 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಕಲ್ಬುರ್ಗಿಯಲ್ಲಿ 8 ಮಂದಿ, ಮೈಸೂರಿನಲ್ಲಿ ಏಳು ಬೀದರ್ ನಲ್ಲಿ 5, ಬಳ್ಳಾರಿಯಲ್ಲಿ ನಾಲ್ವರು, ಹಾಸನದಲ್ಲಿ ಮೂವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಹಾಗೆಯೇ ಬೆಂಗಳೂರು ಗ್ರಾಮಾಂತರ, ಮಂಡ್ಯ, ವಿಜಯಪುರ, ರಾಮನಗರದಲ್ಲಿ ಇಬ್ಬರು ಶಂಕಿತರು ಮೃತಪಟ್ಟಿದ್ದಾರೆ ಬಾಗಲಕೋಟೆ, ಚಿಕ್ಕಬಳ್ಳಾಪುರ, ದಕ್ಷಿಣಕನ್ನಡ, ಹಾವೇರಿ, ಕೊಡಗು, ಕೋಲಾರ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಬ್ಬ ಸೋಂಕಿತರು ಸಾವನ್ನಪ್ಪಿದ್ದಾರೆ.

ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ ಇಂದು ಒಂದು ಲಕ್ಷ 76ಸಾವಿರ ದಾಟಿದೆ. ಇಂದು ರಾಜ್ಯದಲ್ಲಿ23558 ಜನರಿಗೆಸೊಂಕು ದೃಢ ಪಟ್ಟಿದೆ. ಇಂದು6412 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 116ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1222202ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟ1032233 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 176188 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13762 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 904 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ13640ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 583675ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 70 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5382ಕ್ಕೆ ಏರಿಕೆಯಾಗಿದೆ.
ಇಂದು3509ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ453398 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು124894 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 153, ಬಳ್ಳಾರಿ 792, ಬೆಳಗಾವಿ 301, ಬೆಂಗಳೂರು ಗ್ರಾಮಾಂತರ 544, ಬೀದರ್ 202, ಚಾಮರಾಜನಗರ 170, ಚಿಕ್ಕಬಳ್ಳಾಪುರ 221, ಚಿಕ್ಕಮಗಳೂರು 198, ಚಿತ್ರದುರ್ಗ 118, ದಕ್ಷಿಣ ಕನ್ನಡ 401, ದಾವಣಗೆರೆ 200, ಧಾರವಾಡ 379, ಗದಗ 72, ಹಾಸನ 445, ಹಾವೇರಿ 27, ಕಲಬುರಗಿ 757, ಕೊಡಗು 141, ಕೋಲಾರ 369, ಕೊಪ್ಪಳ 133, ಮಂಡ್ಯ 492, ಮೈಸೂರ 975, ರಾಯಚೂರು 220, ರಾಮನಗರ 90, ಶಿವಮೊಗ್ಗ 266, ತುಮಕೂರು 1176, ಉಡುಪಿ 471, ಉತ್ತರ ಕನ್ನಡ 171, ವಿಜಯಪುರ 335, ಯಾದಗಿರಿ 99.