ರಾಜ್ಯದಲ್ಲಿ ಕೊರೊನಾ ಸ್ಪೋಟ:2523 ಜನರಿಗೆ ಸೋಂಕು, ಹತ್ತು ಸಾವು

ಬೆಂಗಳೂರು, ಮಾ. 25- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ‌ ಅಬ್ಬರ ಮುಂದುವರೆದಿದ್ದು, ಹಲವು ತಿಂಗಳ ನಂತರ ಹೊಸ ಸೋಂಕು ಪ್ರಕರಣಗಳು ಮತ್ತೆ ಎರಡುವರೆ ಸಾವಿರ ಗಡಿದಾಟಿದೆ ಕಳೆದ 24 ಗಂಟೆಗಳಲ್ಲಿ2523 ಜನರಿಗೆ ಸೋಂಕು ದೃಡಪಟ್ಟಿದೆ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು 10 ಸೋಂಕಿತರು ಮೃತಪಟ್ಟಿದ್ದಾರೆ ಹಾಗೆಯೇ ರಾಜಧಾನಿ ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ ಒಂದುವರೆ ಸಾವಿರ ಗಡಿದಾಟಿದೆ ಬೆಂಗಳೂರಿನಲ್ಲಿ ಆರು ಸೋಂಕಿತರು ಮೈಸೂರಿನಲ್ಲಿ ಇಬ್ಬರು ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.
ಬೇರೆ ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಇಂದು ಆಸ್ಪತ್ರೆ ಯಿಂದ 1192 ಮಂದಿ ಬಿಡುಗಡೆ ಯಾಗಿದ್ದು, ಇದುವರೆಗೆ ಒಟ್ಟು 947781ಮಂದಿ ಆಸ್ತತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 18207 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12471 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 978478ಕ್ಕೆ ಏರಿಕೆಯಾಗಿದೆ. 150 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ದೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 1623 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು 665 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 422859 ಕ್ಕೆ ಏರಿಕೆಹಾಗಿದ್ದು, ಒಟ್ಟು 12472ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 405817 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು6 ಸೋಂಕಿತ ಮೃತಪಟ್ಟಿದ್ದು ಇದುವರೆಗೂ ಬೆಂಗಳೂರಿನಲ್ಲಿ ಕೊರೋನಾಗೆ 4569ಬಲಿಯಾಗಿದ್ದಾರೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 07, ಬಳ್ಳಾರಿ 15, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 37, ಬೀದರ್ 78, ಚಾಮರಾಜನಗರ 04, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 12, ಚಿತ್ರದುರ್ಗ 05, ದಕ್ಷಿಣ ಕನ್ನಡ 72, ದಾವಣಗೆರೆ 08, ಧಾರವಾಡ 24, ಗದಗ 09, ಹಾಸನ 48, ಹಾವೇರಿ 01, ಕಲಬುರಗಿ 100, ಕೊಡಗು 11, ಕೋಲಾರ 15, ಕೊಪ್ಪಳ 04, ಮಂಡ್ಯ43, ಮೈಸೂರು 89, ರಾಯಚೂರು 12, ರಾಮನಗರ 10, ಶಿವಮೊಗ್ಗ 22, ತುಮಕೂರು 29 ,ಉಡುಪಿ 145, ಉತ್ತರ ಕನ್ನಡ 13, ವಿಜಯಪುರ 35, ಯಾದಗಿರಿ 09.