ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆ: ಹೆಚ್ಚಿದ ಆತಂಕ

ಬೆಂಗಳೂರು, ಡಿ.8- ರಾಜ್ಯದಲ್ಲಿ ಕೊರೊನಾ ಸೋಂಕು ಸೋಂಕು ಸಂಖ್ಯೆ ಮತ್ತೆ ಏರಿಕೆಯಾಗಿದ್ದು 399 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 6 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು ಅವಧಿಯಲ್ಲಿ 238 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜ್ಯದ ಬಾಗಲಕೋಟೆ,ಬೀದರ್,ಚಿತ್ರದುರ್ಗ, ಗದಗ,‌ಹಾವೇರಿ,ಕೊಪ್ಪಳ, ರಾಯಚೂರು, ರಾಮನಗರ, ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಖ್ಯೆ ಪತ್ತೆಯಾಗಿಲ್ಲ.

ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು 215 ಮಂದಿಗೆ ಇಳಿಕೆಯಾಗಿದೆ. 97 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.ಇಂದು 3 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ ‌ 29,90,098 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,53,565 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,249 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,255 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.0.34 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 1.50 ರಷ್ಟು ಇದೆ.

1,16 ಲಕ್ಷ ಮಂದಿಗೆ ಪರೀಕ್ಷೆ:

ರಾಜ್ಯದಲ್ಲಿ ಇಂದು 1,16,141 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,41,12,980 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 5
  • ಬೆಳಗಾವಿ – 1
  • ಬೆಂಗಳೂರು ಗ್ರಾಮಾಂತರ- 2
  • ಬೆಂಗಳೂರು ನಗರ. – 244
  • ಬೀದರ್ 0
  • ಚಾಮರಾಜನಗರ- 1
  • ಚಿಕ್ಕಬಳ್ಳಾಪುರ- 2
  • ಚಿಕ್ಕಮಗಳೂರು- 14
  • ಚಿತ್ರದುರ್ಗ- 0
  • ದಕ್ಷಿಣ ಕನ್ನಡ – 15
  • ದಾವಣಗೆರೆ- 1
  • ಧಾರವಾಡ- 10
  • ಗದಗ- 0
  • ಹಾಸನ- 2
  • ಹಾವೇರಿ- 0
  • ಕಲಬುರಗಿ- 1
  • ಕೊಡಗು- 30
  • ಕೋಲಾರ- 5
  • ಕೊಪ್ಪಳ- 0
  • ಮಂಡ್ಯ- 7
  • ಮೈಸೂರು- 38
  • ರಾಯಚೂರು- 0
  • ರಾಮನಗರ – 0
  • ಶಿವಮೊಗ್ಗ- 5
  • ತುಮಕೂರು- 10
  • ಉಡುಪಿ- 4
  • ಉತ್ತರ ಕನ್ನಡ- 1
  • ವಿಜಯಪುರ – 1
  • ಯಾದಗಿರಿ- 0