ರಾಜ್ಯದಲ್ಲಿ ಕೊರೊನಾ ಸೋಂಕು ,ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ

ಬೆಂಗಳೂರು, ನ.12- ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಇಳಿಕೆಯಾಗಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 227 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.2 ಮಂದಿ ಸೋಂಕಿತರು ಸಾವನ್ನಪ್ಪಿದ್ದು. ಈ ಅವಧಿಯಲ್ಲಿ 206 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಕಡಿಮೆಯಾಗಿದ್ದ ಸೋಂಕು ಪ್ರಕರಣ ಇಂದು ಕಡಿಮೆಯಾಗಿದೆ.147 ಮಂದಿಗೆ ಕಾಣಿಸಿಕೊಂಡಿದ್ದು,62 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಓರ್ವ ಸಾವನ್ನಪ್ಪಿದ್ದಾರೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,91,69 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,45,164 ಕ್ಕೆ ಏರಿಕೆಯಾಗಿದೆ.ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,140 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,036 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ 0.22. ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.88 ರಷ್ಟು ಇದೆ.

1.03 ಲಕ್ಷ ಪರೀಕ್ಷೆ:

ರಾಜ್ಯದಲ್ಲಿ ಇಂದು 1,03,169 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,19,04,536 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 1
  • ಬೆಳಗಾವಿ – 5
  • ಬೆಂಗಳೂರು ಗ್ರಾಮಾಂತರ- 1
  • ಬೆಂಗಳೂರು ನಗರ. – 148
  • ಬೀದರ್ 0
  • ಚಾಮರಾಜನಗರ- 1
  • ಚಿಕ್ಕಬಳ್ಳಾಪುರ- 1
  • ಚಿಕ್ಕಮಗಳೂರು- 1
  • ಚಿತ್ರದುರ್ಗ- 3
  • ದಕ್ಷಿಣ ಕನ್ನಡ – 14
  • ದಾವಣಗೆರೆ- 0
  • ಧಾರವಾಡ- 4
  • ಗದಗ- 0
  • ಹಾಸನ- 7
  • ಹಾವೇರಿ- 0
  • ಕಲಬುರಗಿ- 0
  • ಕೊಡಗು- 5
  • ಕೋಲಾರ- 2
  • ಕೊಪ್ಪಳ- 0
  • ಮಂಡ್ಯ- 2
  • ಮೈಸೂರು- 10
  • ರಾಯಚೂರು- 0
  • ರಾಮನಗರ – 0
  • ಶಿವಮೊಗ್ಗ- 2
  • ತುಮಕೂರು- 6
  • ಉಡುಪಿ- 6
  • ಉತ್ತರ ಕನ್ನಡ- 9
  • ವಿಜಯಪುರ – 0
  • ಯಾದಗಿರಿ- 0