ರಾಜ್ಯದಲ್ಲಿ ಕೊರೊನಾ ಸೋಂಕು ದುಪ್ಪಟ್ಟು ಏರಿಕೆ

ಬೆಂಗಳೂರು, ಸೆ.15- ರಾಜ್ಯದಲ್ಲಿ ಹಲವು ದಿನಗಳಿಂದ ಇಳಿಕೆಯಾಗಿದ್ದ ಕೋರೊನಾ ಸೋಂಕು ಸಂಖ್ಯೆ ಇಂದು ದುಪ್ಪಟ್ಟು ಆಗಿದೆ.

ಜೊತೆಗೆ ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಮತ್ತಷ್ಟು ಇಳಿಮುಖವಾಗಿದ್ದು. ಚೇತರಿಕೆ ಸಂಖ್ಯೆ ಕುಸಿತ ಕಂಡಿದೆ ಎಂದು ಆರೋಗ್ಯ ಮತ್ತು ‌ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 1116 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 8 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 970 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ

ಬಾಗಲಕೋಟೆ, ಬೀದರ್, ಗದಗ, ರಾಯಚೂರು, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.65ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ 0.71 ಕ್ಕೆ ಇಳಿಕೆಯಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,892 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,64,083 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,10,626 ಕ್ಕೆ ಹೆಚ್ಚಳವಾಗಿದೆ.

ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,537 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆಯಾಗಿದೆ .ಇಂದು 462 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 5 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 265 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1.70 ಲಕ್ಷ ಪರೀಕ್ಷೆ

ರಾಜ್ಯದಲ್ಲಿ ಇಂದು 1,70,306 ಮಂದಿ್ಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 4,56,89,893 ಕ್ಕೆ ಹೆಚ್ಚಳವಾಗಿದೆ.

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

  • ಬಾಗಲಕೋಟೆ – 0
  • ಬಳ್ಳಾರಿ – 4
  • ಬೆಳಗಾವಿ -10
  • ಬೆಂಗಳೂರು ಗ್ರಾಮಾಂತರ- 15
  • ಬೆಂಗಳೂರು ನಗರ. -462
  • ಬೀದರ್ -0
  • ಚಾಮರಾಜನಗರ – 7
  • ಚಿಕ್ಕಬಳ್ಳಾಪುರ – 2
  • ಚಿಕ್ಕಮಗಳೂರು- 50
  • ಚಿತ್ರದುರ್ಗ – 5
  • ದಕ್ಷಿಣ ಕನ್ನಡ -102
  • ದಾವಣಗೆರೆ -7
  • ಧಾರವಾಡ -4
  • ಗದಗ – 0
  • ಹಾಸನ – 81
  • ಹಾವೇರಿ – 1
  • ಕಲಬುರಗಿ- 1
  • ಕೊಡಗು – 67
  • ಕೋಲಾರ -12
  • ಕೊಪ್ಪಳ -1
  • ಮಂಡ್ಯ – 15
  • ಮೈಸೂರು -76
  • ರಾಯಚೂರು -0
  • ರಾಮನಗರ -0
  • ಶಿವಮೊಗ್ಗ – 25
  • ತುಮಕೂರು -60
  • ಉಡುಪಿ – 89
  • ಉತ್ತರ ಕನ್ನಡ – 20
  • ವಿಜಯಪುರ – 0
  • ಯಾದಗಿರಿ- 0