ರಾಜ್ಯದಲ್ಲಿ ಕೊರೊನಾ ಸುನಾಮಿ ಇಂದೂ 17 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು

ಬೆಂಗಳೂರು, ಏ.17- ರಾಜ್ಯದಲ್ಲಿ ಕೊರೊನಾ ಸೋಂಕು ಎಗ್ಗಿಲ್ಲದೆ ಆರ್ಭಟಿಸುತ್ತಿದೆ, ಹೊಸ ಪ್ರಕರಣಗಳು 17000 ಗಡಿದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿನವೂ ಹೊಸ ದಾಖಲೆ ಬರೆಯುತ್ತಿದೆ ಪ್ರತಿದಿನವೂ ಹಳೆ ದಾಖಲೆಯನ್ನು ಮೀರುವಂತೆ ಸೋಂಕು ಪ್ರಕರಣಗಳು ದೃಡ ಪಡುತ್ತಿವೆ. ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಹೊಸ ಸೋಂಕು ಪ್ರಕರಣಗಳ ಸಂಖ್ಯೆ 11 ಸಾವಿರದ ಗಡಿ ದಾಟಿದೆ. ಇಂದು ಸಾವಿಗೀಡಾಗಿರುವ ಸಂಖ್ಯೆಯಲ್ಗು ಭಾರಿ ಏರಿಕೆಯಾಗಿದ್ದು.
ಕಳೆದ 24 ಗಂಟೆಗಳಲ್ಲಿ 80 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಒಂದರಲ್ಲೇ 43 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಹಾಗೆಯೇ ಮೈಸೂರು ,ಹಾಸನದಲ್ಲಿ ತಲಾ ಎಂಟು ಮಂದಿ, ಕಲ್ಬುರ್ಗಿಯಲ್ಲಿ ತುಮಕೂರು ಮೂವರು, ಬಳ್ಳಾರಿ ಬೀದರ್, ಚಾಮರಾಜನಗರ ಧಾರವಾಡದಲ್ಲಿತಲಾ ಇಬ್ಬರು, ಚಿಕ್ಕಬಳ್ಳಾಪುರ ,ಚಿಕ್ಕಮಗಳೂರು ದಕ್ಷಿಣಕನ್ನಡ ,ಕೋಲಾರ, ಮಂಡ್ಯ, ಶಿವಮೊಗ್ಗ ,ಉತ್ತರಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಇಂದು ಒಂದು ಲಕ್ಷ ಇಪ್ಪತ್ತು ಸಾವಿರ ಸನಿಹದಲ್ಲಿದೆ.
ಇಂದು ರಾಜ್ಯದಲ್ಲಿ17,489 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು5565ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 80 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1141998ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು1009549 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 119160 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13270 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 589 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ11404 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 533842ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 43 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5063ಕ್ಕೆ ಏರಿಕೆಯಾಗಿದೆ.
ಇಂದು3253ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ441054 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು87724 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 50, ಬಳ್ಳಾರಿ 355, ಬೆಳಗಾವಿ 188, ಬೆಂಗಳೂರು ಗ್ರಾಮಾಂತರ 262, ಬೀದರ್ 359, ಚಾಮರಾಜನಗರ 136, ಚಿಕ್ಕಬಳ್ಳಾಪುರ 179, ಚಿಕ್ಕಮಗಳೂರು 68, ಚಿತ್ರದುರ್ಗ 80, ದಕ್ಷಿಣ ಕನ್ನಡ 309, ದಾವಣಗೆರೆ 122, ಧಾರವಾಡ 272, ಗದಗ 37, ಹಾಸನ 224, ಹಾವೇರಿ 48, ಕಲಬುರಗಿ 560, ಕೊಡಗು 58, ಕೋಲಾರ 144, ಕೊಪ್ಪಳ 121, ಮಂಡ್ಯ 223, ಮೈಸೂರ 811, ರಾಯಚೂರು 91, ರಾಮನಗರ 102, ಶಿವಮೊಗ್ಗ 125, ತುಮಕೂರು 507, ಉಡುಪಿ 118, ಉತ್ತರ ಕನ್ನಡ 102, ವಿಜಯಪುರ 281, ಯಾದಗಿರಿ 153.