ರಾಜ್ಯದಲ್ಲಿ ಕೊರೊನಾ ರಣಕೇಕೆ 31,830 ಹೊಸ ಪ್ರಕರಣ: ಸೋಂಕಿಗೆ 180 ಬಲಿ

ಬೆಂಗಳೂರು, ಏ.27-ರಾಜ್ಯದಲ್ಲಿಂದು ಕೊರೊನಾ ರಣಕೇಕೆ ಹಾಕಿದೆ. ಒಂದೇ ದಿನ 31,830 ಹೊಸ ಪ್ರಕರಣಗಳು ದಾಖಲಾಗಿವೆ. ಇಂದು ರಾಜ್ಯದಲ್ಲಿ 180 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 14,807 ಕ್ಕೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 301899 ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
10,783 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ಈ ಮೂಲಕ ಇದುವರೆಗೆ ಬಿಡುಗಡೆ ಯಾದವರ ಸಂಖ್ಯೆ 1084050ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 2063 ಜನರು ದಾಖಲಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1400775 ಕ್ಜೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಹೊಸ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇಂದು 17550 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 687751 ಕ್ಕೆ ಏರಿಕೆಯಾಗಿದೆ.
ಒಂದೇ ದಿನ ನಗರದಲ್ಲಿ 97 ಮಂದಿ ಸಾವಿಗೀಡಾಗಿದ್ದು ಮೃತರ ಸಂಖ್ಯೆ 6002 ಕ್ಕೆ ಏರಿದೆ.ಇಂದು ನಗರದಲ್ಲಿ 3899 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಒಟ್ಟು 475525 ಮಂದಿ ಮನೆಗೆ ತೆರಳಿದಂತಾಗಿದೆ.206223 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಜಿಲ್ಲೆಗಳಲ್ಲೂ ಕೊರೊನಾ ಸೋಂಕು ಏರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಬಾಗಲಕೋಟೆ 283, ಬಳ್ಳಾರಿ 907, ಬೆಳಗಾವಿ 219, ಬೆಂಗಳೂರು ಗ್ರಾಮಾಂತರ 599, ಚಾಮರಾಜನಗರ 212, ಚಿಕ್ಕಬಳ್ಳಾಪುರ 544, ಚಿಕ್ಕಮಗಳೂರು 275, ಚಿತ್ರದುರ್ಗ 145, ದಕ್ಷಿಣ ಕನ್ನಡ 486, ದಾವಣಗೆರೆ 300, ಧಾರವಾಡ 423, ಗದಗ119, ಹಾಸನ 503,ಹಾವೇರಿ 99, ಕಲಬುರಗಿ 772, ಕೊಡಗು 373, ಕೋಲಾರ. 548, ಕೊಪ್ಪಳ 382, ಮಂಡ್ಯ 737, ಮೈಸೂರು 2042, ರಾಯಚೂರು 736, ರಾಮನಗರ 169, ಶಿವಮೊಗ್ಗ 169, ತುಮಕೂರು 1169, ಉಡುಪಿ 477, ಉತ್ತರ ಕನ್ನಡ 205, ವಿಜಯಪುರ. 531 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 414 ಕ್ಕೂ ಪ್ರಕರಣಗಳು ದಾಖಲಾಗಿವೆ.