ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟ 29,438 ಮಂದಿಗೆ ಸೋಂಕು: 208 ಮಂದಿ ಬಲಿ

ಬೆಂಗಳೂರು, ಏ. 24- ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನೇ ದಿನೇ ತಾರಕಕ್ಕೇರುತ್ತಿದ್ದು ಇಂದು ಒಂದೇ ದಿನ 29,438 ಮಂದಿಗೆ ದಾಖಲೆ ಪ್ರಮಾಣದಲ್ಲಿ ಸೋಂಕು ತಗುಲಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 208 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.9,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮರಣ ಮೃದುಂಗ ಮುಂದುವರಿದಿದ್ದು, 149 ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು ಮತ್ತು ರಾಜ್ಯಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲೂ ಮಹಾಸ್ಪೋಟವಾಗುತ್ತಿದ್ದು ತಲ್ಲಣಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ 17,342 ಮಂದಿಗೆ ಸೋಂಕ‌ ತಗುಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ರಾಜ್ಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 13,04,397ಕ್ಕೆ ಏರಿಕೆ ಆಗಿದೆ. ಈ ಪೈಕಿ 10,55,612 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 2,34,483 ಸಕ್ರಿಯ ಪ್ರಕರಗಳಿವೆ. ಈ ಪೈಕಿ ಬೆಂಗಳೂರು ನಗರದಲ್ಲೇ 1,62,171 ಸಕ್ರಿಯ ಪ್ರಕರಣಗಳು ಏರಿಕೆಯಾಗಿವೆ.
ಇಲ್ಲಿಯವರೆಗೆ ಒಟ್ಟು 14,283 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 16,213 ಆಂಟಿಜನ್, 1,73,400 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 1,89,613 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ಒಟ್ಟು 1,04,637 ಮಂದಿಗೆ ಲಸಿಕೆ ನೀಡಲಾಗಿದೆ.
ಐಸಿಯು ಸೋಂಕಿತರ ಸಂಖ್ಯೆ 1,280ಕ್ಕೆ ಏರಿಕೆ ಆಗಿದ್ದು, ಬೆಂಗಳೂರು ನಗರದಲ್ಲಿ 259, ಕಲಬುರಗಿಯಲ್ಲಿ 265, ದಾವಣಗೆರೆಯಲ್ಲಿ 85 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ತುಮಕೂರಿನಲ್ಲಿ 1,559, ಹಾಸನ 823, ಬಳ್ಳಾರಿ 731, ಮಂಡ್ಯ 688, ಬೆಂಗಳೂರು ಗ್ರಾಮಾಂತರ 684 ಮಂದಿಗೆ ಸೋಂಕು ತಗುಲಿದೆ.