ರಾಜ್ಯದಲ್ಲಿ ಕೊರೊನಾ ಭಾರೀ ಇಳಿಕೆ

ಬೆಂಗಳೂರು, ನ. ೧೭- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಬಾರಿ ಇಳಿಮುಖವಾಗಿದ್ದು ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ೬೦೦ ಹತ್ತಿರ ಬಂದಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಾಗೆಯೇ ರಾಜ್ಯದ ೧೨ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ಒಂದಂಕಿಗೆ ಇಳಿಮುಖವಾಗಿವೆ. ಜೊತೆಗೆ ೨೪ ಜಿಲ್ಲೆಗಳಲ್ಲಿ ಇಂದು ಶೂನ್ಯ ಮರಣ ವರದಿಯಾಗಿದೆ.
ಇಂದು ರಾಜ್ಯದಲ್ಲಿ ೧,೧೫೭ ಜನರಿಗೆ ಸೋಂಕು ತಗುಲಿದೆ. ಇಂದು ಕೊರೊನಾದಿಂದ ೨,೧೮೮ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ರಾಜ್ಯದಲ್ಲಿ ಕೊರೊನಾ ಒಟ್ಟು ಸೋಂಕಿತರ ಸಂಖ್ಯೆ ೮,೬೨೮೦೪ಕ್ಕೆ ಏರಿಕೆಯಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ ೮೨೫೧೪೧ ಏರಿಕೆ. ರಾಜ್ಯದಲ್ಲಿ ಈಗ ಒಟ್ಟು, ೨೬,೧೦೩ ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ ೧೨ ಸೋಂಕಿತರು ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ ೧೧,೫೪೧ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ೭೩೦ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ೫೯೭ ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ೩೫೭೮೭೭
ಬೆಂಗಳೂರಿನಲ್ಲಿ ಇದುವರೆಗೂ ೩೩೫೯೩೮ ಚೇತರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ೮೩೩ ಮ೦ದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ೧೭,೯೨೯ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಆರು ಸೋಂಕಿತರು ಮೃತಪಟ್ಟಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ ಸೋಂಕಿನಿಂದ ೪೦೦೯ ಮೃತಪಟ್ಟಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಬಾಗಲಕೋಟೆ ೬ ಬಳ್ಳಾರಿ ೧೫, ಬೆಳಗಾವಿ ೨೯, ಬೆಂಗಳೂರು ಗ್ರಾಮಾಂತರ ೪೬, , ಬೀದರ್ ೯, ಚಾಮರಾಜನಗರ ೬, ಚಿಕ್ಕಬಳ್ಳಾಪುರ ೨೬, ಚಿಕ್ಕಮಗಳೂರು ೧೭, ಚಿತ್ರದುರ್ಗ ೧೬, ದಕ್ಷಿಣ ಕನ್ನಡ ೫೦, ದಾವಣಗೆರೆ ೨೨, ಧಾರವಾಡ ೫, ಗದಗ ೯, ಹಾಸನ ೫೨, ಹಾವೇರಿ ೪, ಕಲಬುರಗಿ ೨೧, ಕೊಡಗು ೨, ಕೋಲಾರ ೯, ಕೊಪ್ಪಳ ೨, ಮಂಡ್ಯ ೫೬, ಮೈಸೂರು ೬೪, ರಾಯಚೂರು ೧೫, ರಾಮನಗರ ೭, ಶಿವಮೊಗ್ಗ ೪, ತುಮಕೂರು ೧೫, ಉಡುಪಿ ೧೦, ಉತ್ತರ ಕನ್ನಡ ೧೯, ವಿಜಯಪುರ ೧೯ ಮತ್ತು ಯಾದಗಿರಿಂiರಿಯಲ್ಲಿ ೫ ಪ್ರಕರಣಗಳು ದಾಖಲಾಗಿವೆ.