ರಾಜ್ಯದಲ್ಲಿ ಕೊರೊನಾ ಇಳಿಮುಖ ಇಂದು 496 ಹೊಸ ಪ್ರಕರಣ

ಬೆಂಗಳೂರು, ಜ‌.‌11-ರಾಜ್ಯದಲ್ಲಿ ಇಂದು ಹೊಸದಾಗಿ 496 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಒಟ್ಟೂ ಸೋಂಕಿತರ ಸಂಖ್ಯೆ 9,28,055ಕ್ಕೆ ತಲುಪಿದೆ.

ಸೋಂಕಿಗೆ ಇಂದೇ 4 ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 12,144ಕ್ಕೆ ಏರಿದೆ.ಇಂದೇ ಆಸ್ಪತ್ರೆಯಿಂದ 797 ಮಂದಿ ಬಿಡುಗಡೆಯಾಗಿದ್ದಾರೆ.

9,06,548 ಮಂದಿ ಗುಣಮುಖವಾಗಿದ್ದು12,144 ಮಂದಿಗೆ ನಿಗದಿತ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ‌ 282 ಪ್ರಕರಣಗಳು ವರದಿಯಾಗಿವೆ ನಗರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ,1 ಬಳ್ಳಾರಿ 2 ಬೆಳಗಾವಿ‌ 6, ಬೆಂಗಳೂರು ಗ್ರಾಮಾಂತರ 6,-ಬೀದರ್‌ 5, ಚಾಮರಾಜನಗರ 2, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 5 ಚಿತ್ರದುರ್ಗ 14 ದಕ್ಷಿಣ ಕನ್ನಡ 10, ದಾವಣಗೆರೆ 4, ಧಾರವಾಡ 19 ಗದಗದಲ್ಲಿ 3 ಹಾಸನದಲ್ಲಿ 16 ಹಾವೇರಿ 2, ಕಲಬುರಗಿ 14 ಕೊಡಗು12, ಕೋಲಾರ 4 ಕೊಪ್ಪಳ 04 ಮಂಡ್ಯ 04 ಮೈಸೂರು,36 ರಾಯಚೂರು 5 ರಾಮನಗರ 00 ಶಿವಮೊಗ್ಗ 04 ತುಮಕೂರು 12 ಉಡುಪಿ 01 ಉತ್ತರ ಕನ್ನಡ 7 ವಿಜಯಪುರ 05 ಹಾಗೂ ಯಾದಗಿರಿಯಲ್ಲಿ 02ಪ್ರಕರಣಗಳು ಪತ್ತೆಯಾಗಿವೆ.