ರಾಜ್ಯದಲ್ಲಿ ಕೊರೊನಾ ಇಳಿಕೆ: ಚೇತರಿಕೆಯು ಹೆಚ್ಚಳ


ಬೆಂಗಳೂರು ನ.11-ರಾಜ್ಯದಲ್ಲಿ ಸತತವಾಗಿ ಕೊರೊನಾ ಸೋಂಕು ಪ್ರಕರಣಗಳ ಇಳಿಕೆ ಮುಂದುವರೆದಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಸೋಂಕು ಇಳಿಕೆ ಜೊತೆಗೆ ಸೋಂಕಿನಿಂದ ಗುಣಮುಖರಾಗುವ ಸಂಖ್ಯೆಯು ಹೆಚ್ಚಾಗಿದ್ದು ಹಾಗೆಯೇ ಸಾವಿನ ಪ್ರಮಾಣವುಇಳಿಕೆಯಾಗುತ್ತಿರುವುದು ಜನರ ಆತಂಕವನ್ನು ಕಡಿಮೆ ಮಾಡಿದೆ.


ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 2584ಪ್ರಕರಣಗಳು ಧೃಡಪಟ್ಟಿದೆ ಹಾಗೆಯೇ ಸೋಂಕಿನಿಂದ2881ಮಂದಿ ಗುಣಮುಖರಾಗಿದ್ದಾರೆ. ಸೋಂಕಿಗೆ 23 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 853796ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 811581ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 30743 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11453 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 824 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1665ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 353146ಕ್ಕೆ ಏರಿಕೆಯಾಗಿದೆ.
ನಗರದಲ್ಲುಕಳೆದ24ಗಂಟೆಗಳಲ್ಲಿ ಸೊಂಕಿಗೆ 08ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3977ಕ್ಕೆ ಏರಿಕೆಯಾಗಿದೆ. ಇಂದು1091ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17872ಸಕ್ರಿಯ ಪ್ರಕರಣಗಳಿವೆ.


ಜಿಲ್ಲಾ ವಾರು ಸೊಂಕಿತರ ವಿವರ
ಬಾಗಲಕೋಟೆ 14ಬಳ್ಳಾರಿ 41 ಬೆಳಗಾವಿ28ಬೆಂಗಳೂರು ಗ್ರಾಮಾಂತರ 48ಬೀದರ್06 ಚಾಮರಾಜನಗರ 13 ಚಿಕ್ಕಬಳ್ಳಾಪುರ 15ಚಿಕ್ಕಮಗಳೂರು 55 ಚಿತ್ರದುರ್ಗ55ದಕ್ಷಿಣ ಕನ್ನಡ 63ದಾವಣಗೆರೆ 29ಧಾರವಾಡ 22 ಗದಗ 11 ಹಾಸನ 59ಹಾವೇರಿ 21ಕಲಬುರಗಿ 32ಕೊಡಗು 20ಕೋಲಾರ 16ಕೊಪ್ಪಳ 05ಮಂಡ್ಯ 57ಮೈಸೂರು 112ರಾಯಚೂರು 15ರಾಮನಗರ 11ಶಿವಮೊಗ್ಗ 25ತುಮಕೂರು 59ಉಡುಪಿ 19ಉತ್ತರ ಕನ್ನಡ 21ವಿಜಯಪುರ 33 ಯಾದಗಿರಿ 14