(ಸಂಜೆವಾಣಿ ಪ್ರತಿನಿಧಿಯಿಂದ)
‘ಕಾರ್ಗಿಲ್ ಯುದ್ಧ’ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ನಗರದ ವಾರ್ ಮೆಮೋರಿಯಲ್ ಬಳಿ ಇರುವ ಯೋಧರ ಪ್ರತಿಮೆಗೆ ಪುಷ್ಪಗುಚ್ಛ ಇಟ್ಟು ನಮನ ಸಲ್ಲಿಸಿದರು.
ಬೆಂಗಳೂರು,ಜು.೨೬:ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಇಲ್ಲ, ಬಿತ್ತನೆಯೂ ಚುರುಕಾಗಿದ್ದು,ಕೆಲವೇ ದಿನಗಳಲ್ಲಿ ಶೇ. ೧೦೦ರಷ್ಟು ಬಿತ್ತನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾರ್ಗಿಲ್ ವಿಜಯದಿವಸವಾದ ಇಂದು ಬೆಂಗಳೂರಿನ ಇಂದಿರಾಗಾಂಧಿ ಉದ್ಯಾನವನದಲ್ಲಿರುವ ಹುತಾತ್ಮ ಯೋಧರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಕೈಮೀರಿ ಹೋಗುವ ಪರಿಸ್ಥಿತಿ ಎಲೂ ನಿರ್ಮಾಣವಾಗಿಲ್ಲ. ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ ಸೇರಿದಂತೆ ಎಲ್ಲ ಜಲಾಶಯಗಳಿಗೂ ನೀರು ಹರಿದು ಬರುತ್ತಿದೆ. ಎಲ್ಲೆಡೆ ಬಿತ್ತನೆ ನಡೆದಿದೆ ಎಂದರು.
ಉತ್ತಮ ಮಳೆಯಾಗುತ್ತಿರುವುದು ರೈತರಿಗೂ ಸರ್ಕಾರಕ್ಕೂ ಸಂತೋಷವಾಗಿದೆ. ಎಲ್ಲೂ ಕುಡಿಯುವ ನೀರಿನ ಸಮಸ್ಯೆಇಲ್ಲ, ಟ್ಯಾಂಕರ್ ಮೂಲಕ ಹಿಂದೆ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು.
ರಾಜ್ಯದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಎಲ್ಲ ಜಿಲ್ಲೆಗಳಿಗೂ ಭೇಟಿ ಕೋಡುವ ತೀರ್ಮಾನಮಾಡಿದ್ದೇನೆ.ನಿನ್ನೆ ಹಾವೇರಿಗೆ ಭೇಟಿನೀಡಿದ್ದೆ. ಹಾಗೆಯೇ ಕೃಷ್ಣಭೈರೇಗೌಡ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಜು. ೩೧ರಂದು ಮಂಗಳೂರು ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರ ಅಹವಾಲನ್ನು ಆಲಿಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದರು.
ಡಿಜೆ ಹಳ್ಳಿಹಾಗೂ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕರ ಮೇಲಿನ ಪ್ರಕರಣ ಹಿಂಪಡೆಯುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಇದನ್ನು ಏಕೆ ಹಿಂಪಡೆಯಲಿಲ್ಲವೆಂದು ಪ್ರಶ್ನಿಸಿದರು.ಕಾರ್ಗಿಲ್ ಯೋಧರು ಸ್ಫೂರ್ತಿ.ಕಾರ್ಗಿಲ್ ಯುದ್ಧದಲ್ಲಿ ದೇಶದ ೫೨೪ ಯೋಧರು ಬಲಿದಾನ ಮಾಡಿದ್ದಾರೆ. ದುರ್ಗಮ ಸ್ಥಳದಲ್ಲಿ ಹೋರಾಡಿ ದೇಶದ ರಕ್ಷಣೆ ಮಾಡಿದ್ದಾರೆ. ಅವರ ತ್ಯಾಗ, ಬಲಿದಾನ ಸ್ಮರಣೀಯ ಎಲ್ಲ ಯೋಧರ ಆತ್ಮಕ್ಕೆ ಶಾಂತಿಕೋರಿ ಅವರ ತ್ಯಾಗ ಬಲಿದಾನವನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯ ಕಾರ್ಗಿಲ್ ಯೋಧರು ಹೋರಾಟ ಬದುಕು ಇಂದಿನ ಯುವಕರಿಗೆ ಸ್ಫೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಕಲಿ ಪತ್ರ
ಯಾವುದೇ ಶಾಸಕರು ಸಚಿವರ ಮೇಲೆ ದೂರು ನೀಡಿ ಪತ್ರ ಬರೆದಿಲ್ಲ, ಶಾಸಕರ ಹೆಸರಿನಲ್ಲಿ ನಕಲಿ ಪತ್ರಗಳನ್ನು ಹರಿಬಿಡಲಾಗಿದೆ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಾಸಕರುಗಳು ಶಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಪತ್ರ ಬರೆದಿದ್ದಾರೆ.ಯಾವುದೇ ಮಂತ್ರಿಯ ಮೇಲೆ ದೂರು ನೀಡಿಲ್ಲ. ಹಾಗೂ ಮಂ<ತ್ರಿಯ ಹೆಸರನ್ನು ಹೆಸರಿಸಿಲ್ಲ ಎಂಧು ಸ್ಪಷ್ಟಪಡಿಸಿದ ಅ ವರು ಶಾಸಕ ಬಿ.ಆರ್ ಪಾಟೀಲ್ ಅವರೇ ನಕಲಿ ಪತ್ರ ಎಂದು ಹೇಳಿದ್ದಾರೆ. ಆದರೆ ಪತ್ರಿಕೆಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು/