ರಾಜ್ಯದಲ್ಲಿ ಕಾಂಗ್ರೇಸ್ ಗೆ ಅಡ್ರಸ್ ಇಲ್ಲಾ: ಎಂ.ಪಿ ರೇಣುಕಾಚಾರ್ಯ

ದಾವಣಗೆರೆ. ಜು.೧೮ : ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗೀ ಒಂದು ವರ್ಷವಾಗುತ್ತಿದ್ದು ನಾವು ಜನರಿಗೆ ರಾಜ್ಯ ಸರ್ಕಾರದ ಸಾಧನೆ ತಿಳಿಸಲು ಸಾಧನಾ ಸಮಾವೇಶ ಮಾಡುತ್ತಿದ್ದು, ಇದು ವ್ಯಕ್ತಿ ಪೂಜೆಯಲ್ಲಾ ಬಿಜೆಪಿ ಪೂಜೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರುಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೇಸ್‌ನವರು ಯಾವ ಉತ್ಸವ ಮಾಡುತ್ತಾರೋ ಅವರಿಗೆ ಬಿಟ್ಟ ವಿಷಯ, ರಾಜ್ಯದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ, ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವೆ ಸಂಘರ್ಷ ನಡೆಯುತ್ತಿದೆ ಎಂದರು.ಕಾಂಗ್ರೇಸ್ ನವರು ಸಿಎಂ ಆಗಿದ್ದೇವೆ ಎಂದು ಕನಸು ಕಾಣುತ್ತಿದ್ದಾರೆ, ಆದರೇ ಮುಳುಗಿದ ಹಡಗಿಗೆ ನಾವಿಕನೇ ಇಲ್ಲಾ ಬ್ರಮಾಲೋಕ ಕಾಂಗ್ರೇಸ್ ಇದ್ದು, ಇನ್ನು 20 ರಿಂದ 25 ವರ್ಷ ಅವರು ಕಾಂಗ್ರೇಸ್ ಪ್ರತಿಪಕ್ಷ ಸ್ಥಾನದಲ್ಲಿರುತ್ತೇ ಎಂದು ಭವಿಷ್ಯ ನುಡಿದ ರೇಣುಕಾಚಾರ್ಯ ಮತ್ತೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ಅಡ್ಜೆಸ್ಟ್ಮೆಂಟ್ ಪಾಲಿಟಿಕ್ಸ್ ನಡೆಯುವುದಿಲ್ಲಾ ಎಂದ ರೇಣುಕಾಚಾರ್ಯ, ಕೆಲ ಸಚಿವರು ವಿಧಾನಸೌಧದ ಮೂರನೇ ಮಹಡಿದೆ, ಇನ್ನು ಕೆಲವರು ಕ್ಷೇತ್ರಕ್ಕೆ ಸೀಮಿತರಾಗಿ ಖುರ್ಚಿಗೆ ಅಂಟಿಕೊಂಡು ಕುಳಿತಿದ್ದು ಅಂತಹವರಿಗೆ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಕಿವಿ ಮಾತು ಹೇಳಿದರೆ ತಪ್ಪೇನಿದೆ, ಅವರು ಮಾರ್ಗದರ್ಶನ ಮಾಡ ಬಹುದಲ್ಲವೇ ಎಂದರು. ಸಚಿವರು ವಿಧಾನಸೌಧದ ಮೂರನೇ ಮಹಡಿ ಮಾತ್ರ ಸೀಮಿತ ವಾಗಬಾರದು, ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬಾರದು ಇನ್ನಾದರೂ ಅವರು ಅಗ್ರೆಸೀವ್ ಆಗಿ ಕೆಲಸ ಮಾಡುವಂತೆ ಮನವಿ ಮಾಡಿದರು. ಯಾರ‍್ಯಾರು ಸೀನಿಯರ್ ಮಿನಿಸ್ಟರ್ ಇದ್ದಾರೋ ಅವರು ಸಚಿವ ಸ್ಥಾನ ತ್ಯಾಗ ಮಾಡ ಬೇಕೆಂದು ಈ ಹಿಂದೆ ಹೇಳಿದ್ದೇ, ಆದರೇ ಅವರು ಖುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ. ನಾನು ಸಚಿವನಾಗಲು ಅರ್ಹತೆ ಇದೇ, ನಾನು ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆಂದ ರೇಣುಕಾಚಾರ್ಯ, ಯಡಿಯೂರಪ್ಪನವರು ತಮ್ಮ ಸ್ಥಾನವನ್ನು ತ್ಯಾಗ ಮಾಡಲಿಲ್ವಾ, ಅವರಂತೆ ಎಲ್ಲರೂ ತ್ಯಾಗದ ಮನೋಭಾವನೆ ಇರಬೇಕೆಂದರು.