ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಮಿಗಾ ವಿಶ್ವಾಸ

ಕೆ.ಆರ್.ಪುರ, ಮಾ.೯-ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಹಾಗೂ ದುರಾಡಳಿತದಿಂದ ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಹೇಳಿದರು. ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ನರೇಂದ್ರ ಮೋದಿಯವರ ದುರಾಡಳಿತ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಯಿ ಅವರ ನೇತೃತ್ವದಲ್ಲಿ ಆಗಿರುವ ವ್ಯಾಪಕ ಭ್ರಷ್ಟಾಚಾರ ಇವೆಲ್ಲವನ್ನೂ ಮೆಲುಕು ಹಾಕಿದರೆ ಬಿಜೆಪಿ ಅಧೋಗತಿಗೆ ಹೋಗಿರುವ ವಾತಾವರಣ ನಿರ್ಮಾಣ ಆಗಿದೆ. ಕಳೆದ ನಾಲ್ಕುವರೆ ವರ್ಷದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದೆ. ಜನರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜನರ ಕೋಮು ಭಾವನೆಯನ್ನು ಬಿತ್ತುವುದು ಆಗಿದೆ ಇವೆಲ್ಲ ಸಮಸ್ಯೆಗಳಿಗೆ ಜನರು ಮುಕ್ತಿ ಹಾಡಲು ಬಯಸಿದ್ದಾರೆ ಮುಂದಿನ ಒಂದುವರೆ ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರಲಿದೆ ಎಂದರು.
ನಾವು ಬಿಜೆಪಿಯವರಂತೆ ಮೋದಿ ಮುಖ ನೋಡಿ ಓಟು ಕೇಳುವುದಿಲ್ಲ. ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಓಟು ಕೇಳಲಿದ್ದೇವೆ ಎಂದರು.
ಮುಳಬಾಗಿಲು ಶಾಸಕ ಎಚ್.ನಾಗೇಶ್ ಮಾತನಾಡಿ, ೭೦ ವರ್ಷ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ಕಾಂಗ್ರೆಸ್ ಪಕ್ಷದಿಂದಾಗಿ ಜನರು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಸ್ವಾತಂತ್ರ್ಯದ ಆರಂಭದಿಂದಲೂ ಕಾಂಗ್ರೆಸ್ ಪಕ್ಷ ಹಲವು ಮಹತ್ತರವಾದ ಉದ್ದಿಮೆಗಳನ್ನು ಆರಂಭ ಮಾಡಿ ಜನರಿಗೆ ಕೆಲಸ ಒದಗಿಸಿದೆ. ದೇಶದ ಅಭಿವೃದ್ಧಿಗೆ ಪಾತ್ರ ವಹಿಸಿದೆ.
ಈ ಸಂಧರ್ಭದಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ವಿ.ವರುಣ್, ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಡಿ.ನಾಗಪ್ಪ,ಮಾಜಿ ಅಧ್ಯಕ್ಷ ಎಂಸಿಬಿ ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರಶೇಖರ್, ಮುನಿಯಪ್ಪ, ಕಿಟ್ಟಿ, ಕೆಪಿಸಿಸಿ ಸದಸ್ಯ ಜ್ಯೋತಿಪುರ ಚಂದ್ರು, ಮುಖಂಡರಾದ ನವೀನ್, ಜಗನ್ನಾಥ ಇದ್ದರು.