
ಕೆಜಿಎಫ್ ಮಾ ೮- ಕ್ಯಾಸಂಬಳ್ಳಿ ಗ್ರಾಪಂ, ೪ ಸದಸ್ಯರು, ಯುವಕರು, ಮಹಿಳೆಯರು ಸೇರಿಂದತೆ ೫೦೦ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಯುವ ಕಾರ್‍ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ಅದರಲ್ಲಿ ೨೦೦ ಕ್ಕೂ ಹೆಚ್ಚು ಮಹಿಳೆಯರು ಗ್ರಾಪಂ, ಸದಸ್ಯೆ ಶಾರದಮ್ಮ ನೇತೃತ್ವದಲ್ಲಿ ಶಾಸಕಿ ರೂಪಕಲಾಶಸಿಧರ್ ಕೈಬಲಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕ್ಯಾಸಂಬಳ್ಳಿಯ ವೆಂಕಟಕೃಷ್ಣರ ನಿವಾಸಿದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್‍ಯಕ್ರಮದಲ್ಲಿ ಶಾಸಕಿ ರೂಪಕಲಾಶಶಿಧರ್ ಮಾತನಾಡಿದರು.
ಬಿಜೆಪಿ ಪಕ್ಷದ ಕಾರ್‍ಯವೈಖರಿ ಬಗ್ಗೆ ಬೇಸತ್ತು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಅಪಾರ ಸಂಖ್ಯೆಯ ಮಹಿಳೆಯರು, ಯುವಕರು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸಲಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರವು ೨೦೨೩ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ನುಡಿದಂತೆ ನಡೆದುಕೊಳ್ಳುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ ೨೦೨೩ರಲ್ಲಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಸರ್ಕಾರ ರಚನೆಯಾಗಲಿದೆ, ಕಾಂಗ್ರೆಸ್ ಸರಕಾರದಿಂದ ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಮಹಿಳೆಗೆ ತಿಂಗಳಿಗೆ ೨ ಸಾವಿರ, ತಲಾ ೧೦ ಕೆಜಿ ಅಕ್ಕಿ ನೀಡಲಾಗುವುದು.
ಚುನಾವಣೆಯ ಪ್ರಣಾಳಿಕೆ ಶಾಸಕಿ ರೂಪಕಲಾಶಶಿಧರ್ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ಕಣ್ಣೀರು ಮತ್ತು ರಕ್ತವನ್ನು ಸುರಿಸಿ ನೂರಾರು ಕೋಟಿ ಅನುದಾನ ಕೆಜಿಎಫ್ ಕ್ಷೇತ್ರಕ್ಕೆ ತಂದು ಅಬಿವೃದ್ದಿ ಮಾಡಿದ್ದೇನೆ.
೫ ವರ್ಷಗಳ ಅವಧಿಯಲ್ಲಿ ೨ ವರ್ಷ ಕೋವಿಡ್‌ನಿಂದ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ, ಆದರೆ ತಾವು ಪಟ್ಟು ಬಿಡದೆ ಕ್ಷೇತ್ರಕ್ಕೆ ೫೦೦ ಕೋಟಿ ರೂ. ಅನುದಾನ ತಂದು ದ್ವಿಪಥ ರಸ್ತೆ, ವಿದ್ಯುತ್, ಸಿಸಿ ರಸ್ತೆ, ಕುಡಿಯುವ ನೀರು, ಆಶ್ರಯ ಯೋಜನೆಯ ಮನೆಗಳು ಸೇರಿದಂತೆ ಮೂಲಸೌಲಭ್ಯಕ್ಕೆ ಒತ್ತು ನೀಡಿರುವುದಾಗಿ ತಿಳಿಸಿದರು.
ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಗುಜರಾತ್‌ನ ಗುತ್ತಿಗೆದಾರರು ರಸ್ತೆ ಪೂರ್ಣಗೊಳಿಸದೆ ನಿಲ್ಲಿಸಿದ್ದರು. ಗುತ್ತಿಗೆದಾರರು ಕೈಗೆ ಸಿಗುತ್ತಿರಲಿಲ್ಲ, ಆದರೂ ಸದಸನದಲ್ಲಿ ಗದ್ದಲ ಮಾಡಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿ ಪಿಚ್ಚಹಳ್ಳಿಯಿಂದ ಆಂಧ್ರ ಗಡಿವರೆಗೂ ೫೦ ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಎಂದರು.
ಕೆಜಿಎಫ್‌ನಲ್ಲಿ ೧೦ ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡವನ್ನು ಸಹ ಲೋಕಾರ್ಪಣೆಗೊಳಿಸಿ ಸಾರ್ವಜನಿಕರ ಆರೋಗ್ಯಕ್ಕಾಗಿ ಶ್ರಮಿಸಿದ್ದೇನೆ ಎಂದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವ ರೆಡ್ಡಿ, ವೆಂಕಟಕೃಷ್ಣ, ಎನ್.ಜಿ ಹುಲ್ಕೂರು, ಆನಂದ್‌ಕುಮಾರ್, ಕೆಇಬಿ ವೆಂಕಟೇಶ್, ಸೊಸ್ಯಟಿ ಅಧ್ಯಕ್ಷ ಕಾರಿಪ್ರಸನ್ನ, ನಿರ್ದೇಶಕ ಸುರೇಂದ್ರಗೌಡ, ಮುಖಂಡರಾದ ಸ್ಕೂಲ್ ವೆಂಕಟೇಶಪ್ಪ, ನಂಜುಡೇಗೌಡ, ಚಂದ್ರಕಾಂತ್ ಇದ್ದರು.