ರಾಜ್ಯದಲ್ಲಿ ಒಂದೇ ದಿನ 58,395 ಮಂದಿ ಗುಣಮುಖ : 30309 ಜನರಿಗೆ ಹೊಸ ಸೋಂಕು, 525 ಸಾವು

ಬೆಂಗಳೂರು, ಮೇ. 18- ರಾಜ್ಯದಲ್ಲಿ ಇಂದು‌‌ ಹೊಸ ಸೋಂಕಿನ ಪ್ರಕರಣಗಳಿಗಿಂತ ದಾಖಲೆ ಪ್ರಮಾಣದಲ್ಲಿ ಅಂದರೆ 58,395 ಮಂದಿ ಗುಣಮುಖರಾಗಿದ್ದಾರೆ. ಇಂದು 30309 ಜನರಿಗೆ ಹೊಸ ಸೋಂಕು ತಗುಲಿದೆ.‌ಆದರೆ ರಾಜ್ಯದಲ್ಲಿ ‌ಸಾವಿನ ಸಂಖ್ಯೆ ಇಳಿಕೆಯಾಗಿಲ್ಲ. ಒಂದೇ ದಿನ 525 ಮಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 22838 ಕ್ಕೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಖಚಿತ ಪ್ರಕರಣಗಳ ಸಂಖ್ಯೆ 2273374ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 572058ಕ್ಕೆ ಏರಿಕೆಯಾಗಿದೆ. ಇದುವರೆಗೆ 1674487 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸೋಂಕಿನ ಖಚಿತ ಪ್ರಕರಣಗಳು ಶೇ. 32.50ರಷ್ಟಿದ್ದರೆ, ಸಾವಿನ ಪ್ರಮಾಣ ಶೇ. 1.73 ರಷ್ಚಿದೆ.
ಇಂದು ಬೆಂಗಳೂರಿನಲ್ಲೂ ಸಾವಿನ‌ ಪ್ರಮಾಣ ಏರಿಕೆಯಾಗಿದೆ.‌ಇಂದು 298 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಸಾವಿನ ಸಂಖ್ಯೆ ಹತ್ತು ಸಾವಿರ ಗಡಿ ದಾಟಿದೆ.
ಬೆಂಗಳೂರಿನಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿದ್ದು, 31,795 ಮಂದಿ ಒಂದೇ ದಿನ ಬಿಡುಗಡೆಯಾಗಿದ್ದಾರೆ. ಈ ಮೂಲಕ‌‌ ಬಿಡುಗಡೆ ಹೊಂದಿದವರ ಸಂಖ್ಯೆ 772086ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಇಂದು 8676 ಮಂದಿಗೆ ಹೊಸ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1073072 ಕ್ಜೆ ಏರಿದೆ.
ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಪ್ರಕರಣಗಳು:
ಬಾಗಲಕೋಟೆ 295, ಬಳ್ಳಾರಿ 1799, ಬೆಳಗಾವಿ 2118, ಬೆಂಗಳೂರು ಗ್ರಾಮಾಂತರ 1139, ಬೆಂಗಳೂರು ನಗರ 8676, ಬೀದರ್ 113, ಚಾಮರಾಜನಗರ 345, ಚಿಕ್ಕಬಳ್ಳಾಪುರ 339, ಚಿಕ್ಕಮಗಳೂರು 401, ಚಿತ್ರದುರ್ಗ 436, ದಕ್ಷಿಣ ಕನ್ನಡ 777, ದಾವಣಗೆರೆ 594,, ಧಾರವಾಡ 969, ಗದಗ ,543, ಹಾಸನ 834, ಹಾವೇರಿ 187, ಕಲಬುರಗಿ 548, ಕೊಡಗು 161, ಕೋಲಾರ 1021, ಕೊಪ್ಪಳ 523, ಮಂಡ್ಯ 606, ಮೈಸೂರು 1916, ರಾಯಚೂರು 493, ರಾಮನಗರ 427,, ಶಿವಮೊಗ್ಗ 1168, ತುಮಕೂರು 1562, ಉಡುಪಿ 737, ಉತ್ತರ ಕನ್ನಡ 803, ವಿಜಯಪುರ 262 ಮತ್ತು ಯಾದಗಿರಿಯಲ್ಲಿ 317 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.