ರಾಜ್ಯದಲ್ಲಿ ಒಂದೇ ದಿನ 5279 ಮಂದಿಗೆ ಸೋಂಕು: 32 ಮಂದಿ ಬಲಿ

ಬೆಂಗಳೂರು, ಏ 5- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕು ಶರವೇಗದಲ್ಲಿ ಹಬ್ಬುತ್ತಿದೆ. ಇಂದು ಒಂದೇ ದಿನ ಸೋಂಕಿನ ಪ್ರಕರಣಗಳು 5279 ದಾಖಲಾಗಿವೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು ಇಂದು 32 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶ ನೀಡಿದೆ.
ಇಂದು 1856 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟಾರೆ 965275 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ರಾಜ್ಯದಲ್ಲಿ 42483 ಸಕ್ರಿಯ ಪ್ರಕರಣಗಳಿವೆ. ಮೃತರ ಸಂಖ್ಯೆ 12657 ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1020434 ಹೆಚ್ಚಳವಾಗಿದ್ದು, 345 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಇದುವರೆಗೆ 4667 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ನಗರದಲ್ಲಿ ಇಂದು 3728 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 450279 ಕ್ಕೆ ಏರಿದೆ.

ಜಿಲ್ಲಾವಾರು ಸೊಂಕಿತರ ವಿವರ

ಬಾಗಲಕೋಟೆ 22, ಬಳ್ಳಾರಿ 40, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 34, ಬೀದರ್ 264, ಚಾಮರಾಜನಗರ 30, ಚಿಕ್ಕಬಳ್ಳಾಪುರ15, ಚಿಕ್ಕಮಗಳೂರು 32, ಚಿತ್ರದುರ್ಗ 27, ದಕ್ಷಿಣ ಕನ್ನಡ 56, ದಾವಣಗೆರೆ 9, ಧಾರವಾಡ 55, ಗದಗ 13, ಹಾಸನ 72, ಹಾವೇರಿ 4, ಕಲಬುರಗಿ 181 ಕೊಡಗು 15,ಕೋಲಾರ 82, ಕೊಪ್ಪಳ 20 ,ಮಂಡ್ಯ 48, ಮೈಸೂರು 165,
ರಾಯಚೂರು 17, ರಾಮನಗರ 16, ಶಿವಮೊಗ್ಗ 24, ತುಮಕೂರು 139, ಉಡುಪಿ 59, ಉತ್ತರ ಕನ್ನಡ 51, ವಿಜಯಪುರ 27, ಯಾದಗಿರಿ 17 ಪ್ರಕರಣಗಳು ದಾಖಲಾಗಿವೆ.