ರಾಜ್ಯದಲ್ಲಿ ಒಂದೇ ದಿನ 43,438 ಮಂದಿಗೆ ಸೋಂಕು 239 ಸಾವು

ಬೆಂಗಳೂರು, ಮೇ 3-ರಾಜ್ಯದಲ್ಲಿ ಇಂದು ಕೊರೊನಾ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ 44,438 ಮಂದಿಗೆ ಹೊಸ ಸೋಂಕು‌‌ ತಗುಲಿದ್ದು 239 ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು‌ ಒಂದೇ ದಿನ 115 ಜನರು ಸೋಂಕಿಗೆ ಬಲಿಯಾಗಿದ್ದಾರೆ. 31544‌ ಜನರಿಗೆ ವೈರಾಣು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 819404 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವೆಲ್ ಬುಲೆಟಿನ್ ತಿಳಿಸಿದೆ.
ರಾಜ್ಯದಲ್ಲಿ 20901 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಇದುವರೆಗೆ 1185299 ಮಂದಿ ಗುಣಮುಖರಾಗಿದ್ದಾರೆ. ಮೃತರ‌ ಸಂಖ್ಯೆ 16250 ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1646303. ಹೆಚ್ಚಳವಾಗಿದೆ. ಖಚಿತ ಪ್ರಕರಣಗಳ ಸಂಖ್ಯೆ ಶೇ 29.80 ರಷ್ಷಿದ್ದರೆ,ಮೃತರ ಸಂಖ್ಯೆ 0.33 ರಷ್ಷಿದೆ ಎಂದು ಅಂಕಿ ಅಂಶ ತಿಳಿಸಿದೆ.
ಬಾಗಲಕೋಟೆ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೆಂಗಳೂರು ನಗರ 22,112, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣ ಕನ್ನಡ 793, ದಾವಣಗೆರೆ 104, ಧಾರವಾಡ 1021, ಗದಗ 191, ಹಾಸನ 1673, ಹಾವೇರಿ 330, ಕಲಬುರಗಿ 1083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1367, ಮೈಸೂರು 2685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2361, ಉಡುಪಿ 529, ಉತ್ತರ ಕನ್ನಡ 779,, ವಿಜಯಪುರ 274, ಮತ್ತು ಯಾದಗಿರಿಯಲ್ಲಿ 337 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.