ರಾಜ್ಯದಲ್ಲಿ ಒಂದೇ ದಿನ‌ 52,257 ಮಂದಿ‌ ಚೇತರಿಕೆ: 28,869 ಜನರಿಗೆ ಸೋಂಕು:548 ಬಲಿ

ಬೆಂಗಳೂರು, ಮೇ 20- ರಾಜ್ಯದಲ್ಲಿ ಸತತ ಮೂರನೇ ದಿನವೂ ಗುಣಮುಖರ‌ ಸಂಖ್ಯೆ ಏರಿಕೆಯಾಗಿದೆ.‌ ಇಂದು ಒಂದೇ ದಿನ 52,257 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಒಟ್ಟು 1776695 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ರಾಜ್ಯದಲ್ಲಿ 28,869 ಮಂದಿಗೆ ಹೊಸ ಸೋಂಕು ತಗುಲಿದ್ದು ಆದರೆ ಸಾವಿನ ಸರಮಾಲೆ ಮುಂದುವರಿದಿದ್ದು, ಇಂದು ಒಂದೇ ದಿನ 548 ಮಂದಿ‌‌ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 23,854 ಕ್ಕೆ ಏರಿಕೆಯಾಗಿದೆ.‌ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 534954ಕ್ಕೆ ಹೆಚ್ಚಳವಾಗಿದೆ. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2335524ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.ಇಂದು 289 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಸ್ಥೆ 10,527 ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗಿದ್ದು, 9409 ಮಂದಿಗೆ ಹೊಸ ಸೋಂಕು‌ ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 1094253 ಕ್ಕೆ ಹೆಚ್ಚಳವಾಗಿದೆ. ನಗರದಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿದ್ದು ಇಂದು 25776 ಗುಣಮುಖರಾಗಿದ್ದು ಇದುವರೆಗೆ 777100 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 306625ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಸೋಂಕಿತರ ವಿವರ:
ಬಾಗಲಕೋಟೆ 451, ಬಳ್ಳಾರಿ 1109, ಬೆಳಗಾವಿ 948, ಬೆಂಗಳೂರು ಗ್ರಾಮಾಂತರ 678, ಬೆಂಗಳೂರು ನಗರ 9409, ಬೀದರ್ 94 ಚಾಮರಾಜನಗರ 541, ಚಿಕ್ಕಬಳ್ಳಾಪುರ 487, ಚಿಕ್ಕಮಗಳೂರು 945, ಚಿತ್ರದುರ್ಗ 568, ದಕ್ಷಿಣ ಕನ್ನಡ 926, ದಾವಣಗೆರೆ 538,, ಧಾರವಾಡ 955, ಗದಗ 469, ಹಾಸನ 273, ಹಾವೇರಿ 321, ಕಲಬುರಗಿ 399, ಕೊಡಗು 439, ಕೋಲಾರ 357, ಕೊಪ್ಪಳ 725, ಮಂಡ್ಯ 734, ಮೈಸೂರು 1879, ರಾಯಚೂರು 633, ರಾಮನಗರ 480, ಶಿವಮೊಗ್ಗ 719, ತುಮಕೂರು 1796, ಉಡುಪಿ 809, ಉತ್ತರ ಕನ್ನಡ 582, ವಿಜಯಪುರ 310 ಮತ್ತು ಯಾದಗಿರಿಯಲ್ಲಿ 295 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.