ರಾಜ್ಯದಲ್ಲಿ ಇಂದೂ ಕೊರೊನಾ ಆರ್ಭಟ ಸತತ ೨ ದಿನವೂ 14 ಸಾವಿರ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು

ಬೆಂಗಳೂರು, ಏ.16- ರಾಜ್ಯದಲ್ಲಿ ಇಂದೂ ಕೊರೊನಾ ಬಾರಿ ಏರಿಕೆಯಾಗಿದ್ದು ಸತತ ಎರಡನೇ ದಿನವೂ ರಾಜ್ಯದಲ್ಲಿ ಒಂದೇ ದಿನ 14ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಹೊಸ ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರದ ಹತ್ತಿರದಲ್ಲಿದೆ. ಇಂದು ಸಾವಿಗೀಡಾಗಿರುವ ಸಂಖ್ಯೆಯಲ್ಗು ಭಾರಿ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 78 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಒಂದರಲ್ಲೇ 57 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ , ಮೈಸೂರಿನಲ್ಲಿ ಐವರು ಕಲ್ಬುರ್ಗಿಯಲ್ಲಿ ಮೂವರು ಬೀದರ್ ತುಮಕೂರಿನಲ್ಲಿ ತಲಾ ಇಬ್ಬರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮಂಡ್ಯ ,ರಾಮನಗರ ,ಶಿವಮೊಗ್ಗ ಉಡುಪಿ ,ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು ಒಂದು ಲಕ್ಷ ದಾಟಿದೆ. ಇಂದು ರಾಜ್ಯದಲ್ಲಿ14859 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು4031ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 78 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1124509ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು1003985 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 107315 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13190 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 577 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 9917ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 522438ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 57 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5020ಕ್ಕೆ ಏರಿಕೆಯಾಗಿದೆ.
ಇಂದು2071ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ437801 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು79616 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 71, ಬಳ್ಳಾರಿ279, ಬೆಳಗಾವಿ 120, ಬೆಂಗಳೂರು ಗ್ರಾಮಾಂತರ 358, ಬೀದರ್ 326, ಚಾಮರಾಜನಗರ 68, ಚಿಕ್ಕಬಳ್ಳಾಪುರ 180, ಚಿಕ್ಕಮಗಳೂರು 73, ಚಿತ್ರದುರ್ಗ 57, ದಕ್ಷಿಣ ಕನ್ನಡ 256, ದಾವಣಗೆರೆ 85, ಧಾರವಾಡ 176, ಗದಗ 34, ಹಾಸನ 244, ಹಾವೇರಿ 35, ಕಲಬುರಗಿ 488, ಕೊಡಗು 33, ಕೋಲಾರ 109, ಕೊಪ್ಪಳ 158, ಮಂಡ್ಯ 137, ಮೈಸೂರ 415, ರಾಯಚೂರು 108, ರಾಮನಗರ 100, ಶಿವಮೊಗ್ಗ 67, ತುಮಕೂರು 432, ಉಡುಪಿ 101, ಉತ್ತರ ಕನ್ನಡ 72, ವಿಜಯಪುರ 207, ಯಾದಗಿರಿ 153.