ರಾಜ್ಯದಲ್ಲಿ ಇಂದು952 ಜನರಿಗೆ ಸೋಂಕು, 9 ಸಾವು

ಬೆಂಗಳೂರು, ಡಿ.31- ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ಇಳಿಕೆಯಾಗಿದೆ ಗುಣಮುಖರಾಗುವ ಸಂಖ್ಯೆಯೂ ಹೆಚ್ಚಿದೆ.
ಬೆಂಗಳೂರಿನಲ್ಲೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 952ಜನರಿಗೆ ಸೋಂಕು ದೃಡಪಟ್ಟಿದೆ ಕಳೆದ 24 ಗಂಟೆಗಳಲ್ಲಿ 1282 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ , ಇಂದು ಕೊರೊನಾದಿಂದ 09 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 919496ಕ್ಕೆ ಏರಿದೆ. ಇವರಲ್ಲಿ896116ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 11271 ಸಕ್ರಿಯ ಪ್ರಕರಣಗಳಿವೆ , ಇನ್ನು, ಇದುವರೆಗೂ 12090ಜನ ಕೊರೊನಾ ಕಾರಣದಿಂದ ಸಾವನ್ನಪ್ಪಿದ್ದರೆ, 194 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಕಳೆದ 24 ಗಂಟೆಗಳಲ್ಲಿ 554 ಜನರಿಗೆ ಸೋಂಕು ಧೃಡಪಟ್ಟಿದೆ ಬೆಂಗಳೂರಿನಲ್ಲಿ ಇಂದು849 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಇಂದು ಬೆಂಗಳೂರಿನಲ್ಲಿ 06 ಸೋಂಕಿತರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ388386 ಕ್ಕೆ ಏರಿದೆ. ಇದುವರೆಗೂ 376835 ಜನ ಗುಣಮುಖರಾಗಿದ್ದಾರೆ. 7233 ಸಕ್ರಿಯ ಪ್ರಕರಣಗಳಿವೆ ಇದುವರೆಗೂ ಬೆಂಗಳೂರಿನಲ್ಲಿ 4317 ಜನ ಕೊರೊನಾಗೆ ಬಲಿಯಾಗಿದ್ದಾರೆ.
ಜಿಲ್ಲಾವಾರು ಸೋಂಕಿತರ ವಿವರ

ಬಾಗಲಕೋಟೆಯಲ್ಲಿ 09, ಬಳ್ಳಾರಿ 08ಬೆಳಗಾವಿ23 ಬೆಂಗಳೂರು ಗ್ರಾಮಾಂತರ 24 ಬೀದರ್‌ 05ಚಾಮರಾಜನಗರ 06 ಚಿಕ್ಕಬಳ್ಳಾಪುರ 19 ಚಿಕ್ಕಮಗಳೂರು 09 ಚಿತ್ರದುರ್ಗ 20 ದಕ್ಷಿಣ ಕನ್ನಡ 35 ದಾವಣಗೆರೆ 16 ಧಾರವಾಡ 07 ಗದಗದಲ್ಲಿ 04ಹಾಸನದಲ್ಲಿ 06 ಹಾವೇರಿ 01 ಕಲಬುರಗಿ 18 ಕೊಡಗು14 ಕೋಲಾರ 10 ಕೊಪ್ಪಳ 07ಮಂಡ್ಯ 14 ಮೈಸೂರು48 ರಾಯಚೂರು 00ರಾಮನಗರ 05 ಶಿವಮೊಗ್ಗ 19, ತುಮಕೂರು 28 ಉಡುಪಿ 20 ಉತ್ತರ ಕನ್ನಡ 09 ವಿಜಯಪುರ 07 ಹಾಗೂ ಯಾದಗಿರಿಯಲ್ಲಿ 07ಪ್ರಕರಣಗಳು ಪತ್ತೆಯಾಗಿವೆ.