ರಾಜ್ಯದಲ್ಲಿ ಇಂದು21,794 ಜನರಿಗೆ ಸೋಂಕು,149 ಸಾವು

ಬೆಂಗಳೂರು, ಏ.20- ರಾಜ್ಯದಲ್ಲಿ ಇಂದೂ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ ಸೋಂಕು ಪ್ರಕರಣಗಳು 21ಸಾವಿರ ಗಡಿದಾಟಿದೆ . ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಕಳೆದ ಒಂದು ವರ್ಷದಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ 21 ಸಾವಿರ ಗಡಿ ದಾಟಿರುವುದು ಇದೇ ಮೊದಲು ಹಾಗೂ ದಾಖಲೆ .ಸಾವಿನ ಸಂಖ್ಯೆ ಏರುಮುಖವಾಗಿದೆ ಕಳೆದ ಗಂಟೆಗಳಲ್ಲಿ 149 ಮಂದಿ ಬಲಿಯಾಗಿದ್ದಾರೆ ಇಷ್ಟೊಂದು ಮಂದಿ ಒಂದೇ ದಿನ ಕೊರೊನಾಗೆ ಬಲಿಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 13ಸಾವಿರಕ್ಕು ಹೆಚ್ಚು ಮಂದಿಗೆ ಸೋಂಕು ತಗುಲಿದೆ.
ಬೆಂಗಳೂರು ನಗರ ಒಂದರಲ್ಲೇ ಇಂದು 92 ಮಂದಿ ಕೊರೋನಾಗೆ.
ಬಲಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 13ಮಂದಿ ಸೋಂಕಿತರು, ಬೀದರ್ ಮತ್ತು ಕಲ್ಬುರ್ಗಿಯಲ್ಲಿ ತಲಾ 7 ಬಳ್ಳಾರಿಯಲ್ಲಿ 5 ಧಾರವಾಡದಲ್ಲಿ ತುಮಕೂರು ಹಾಗೂ ಮೈಸೂರಿನಲ್ಲಿ ತಲಾ ನಾಲ್ವರು ಮಂಡ್ಯ, ಶಿವಮೊಗ್ಗ ತಲಾ ಇಬ್ಬರು ಹಾಗೆಯೇ ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ,ಕೊಡಗು ಕೋಲಾರ, ರಾಯಚೂರು, ರಾಮನಗರ ,ಉಡುಪಿ ಹಾಗೂ ಯಾದಗಿರಿ ಗಳಲ್ಲಿ ತಲಾ ಒಬ್ಬ ಸೋಂಕಿತ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ ಇಂದು ಒಂದು ಲಕ್ಷ 59 ಸಾವಿರ ದಾಟಿದೆ. ಇಂದು ರಾಜ್ಯದಲ್ಲಿ21794, ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು4571ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 149 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1198644ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟ1025821 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 159158 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13646 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 751 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ13782ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 570035ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 92 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5312ಕ್ಕೆ ಏರಿಕೆಯಾಗಿದೆ.
ಇಂದು 2035 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ 449889 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು114833 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 125, ಬಳ್ಳಾರಿ 406, ಬೆಳಗಾವಿ 186, ಬೆಂಗಳೂರು ಗ್ರಾಮಾಂತರ 513, ಬೀದರ್ 151, ಚಾಮರಾಜನಗರ 99, ಚಿಕ್ಕಬಳ್ಳಾಪುರ 217, ಚಿಕ್ಕಮಗಳೂರು 115, ಚಿತ್ರದುರ್ಗ 121, ದಕ್ಷಿಣ ಕನ್ನಡ 482, ದಾವಣಗೆರೆ 136, ಧಾರವಾಡ 288, ಗದಗ 73, ಹಾಸನ 410, ಹಾವೇರಿ 37, ಕಲಬುರಗಿ 818, ಕೊಡಗು 65, ಕೋಲಾರ 284, ಕೊಪ್ಪಳ 103, ಮಂಡ್ಯ 413, ಮೈಸೂರ 699, ರಾಯಚೂರು 243, ರಾಮನಗರ 114, ಶಿವಮೊಗ್ಗ 202, ತುಮಕೂರು 1055, ಉಡುಪಿ 109, ಉತ್ತರ ಕನ್ನಡ 106, ವಿಜಯಪುರ 358, ಯಾದಗಿರಿ 84.