ರಾಜ್ಯದಲ್ಲಿ ಇಂದು15,785 ಜನರಿಗೆ ಸೋಂಕು,146 ಸಾವು

ಬೆಂಗಳೂರು, ಏ. 19- ರಾಜ್ಯದಲ್ಲಿ ಇಂದೂ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದೆ ಸೋಂಕು ಪ್ರಕರಣಗಳು ನೆನ್ನೆಗಿಂತ ಇಂದು ಕಡಿಮೆ ಇದೆ ಆದರೆ ಸಾವಿನ ಸಂಖ್ಯೆ ಮಾತ್ರ ಏರುಮುಖವಾಗಿದೆ ಕಳೆದ 24 ಗಂಟೆಗಳಲ್ಲಿ 146 ಮಂದಿ ಬಲಿಯಾಗಿದ್ದಾರೆ ಇಷ್ಟೊಂದು ಮುಂದಿ ಒಂದೇ ದಿನ ಕೊರೊನಾಗೆ ಬಲಿಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು
ಹೊಸ ಪ್ರಕರಣಗಳು 15 ಸಾವಿರ ಗಡಿದಾಟಿದೆ.
ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ನೆನ್ನೆಗಿಂತ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 9ಸಾವಿರಕ್ಕು ಹೆಚ್ಚು ಮಂದಿಗೆ ಸೋಂಕು ತಗುಲಿದೆ
ಬೆಂಗಳೂರು ನಗರ ಒಂದರಲ್ಲೇ ಇಂದು 97 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಹಾಗೆಯೇ ಹಾಸನದಲ್ಲಿ ಹನ್ನೊಂದು ಮಂದಿ ಮೈಸೂರಿನಲ್ಲಿ 8 ಮಂದಿ ಬೆಂಗಳೂರು ಗ್ರಾಮಾಂತರ, ಕಲ್ಬುರ್ಗಿಯಲ್ಲಿ ತಲಾ 6 ಸೋಂಕಿತರು ಧಾರವಾಡದಲ್ಲಿ ಮೂವರು , ಬೀದರ್ ಚಿಕ್ಕಬಳ್ಳಾಪುರ ,ಯಾದಗಿರಿ ಜಿಲ್ಲೆಗಳಲ್ಲಿತಲಾ ಇಬ್ಬರು, ಬಳ್ಳಾರಿ ಬೆಳಗಾವಿ, ಹಾವೇರಿ, ಕೊಡಗು, ಕೋಲಾರ , ರಾಮನಗರ, ತುಮಕೂರು, ಉತ್ತರಕನ್ನಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ ಇಂದು ಒಂದು ಲಕ್ಷ 42 ಸಾವಿರ ದಾಟಿದೆ.
ಇಂದು ರಾಜ್ಯದಲ್ಲಿ15785 ಜನರಿಗೆಸೊಂಕು ದೃಢ ಪಟ್ಟಿದೆ.
ಇಂದು7098ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ 146 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ1176850ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟ1021250 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 142084 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13497 ಜನ ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿ 721 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ9618 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 556253ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ24ಗಂಟೆಗಳಲ್ಲಿ ಸೊಂಕಿಗೆ 97 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ5220ಕ್ಕೆ ಏರಿಕೆಯಾಗಿದೆ.
ಇಂದು4240ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರಿನಲ್ಲಿ ಇದುವರೆಗೂ447854 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು103178 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 97, ಬಳ್ಳಾರಿ 248, ಬೆಳಗಾವಿ 115, ಬೆಂಗಳೂರು ಗ್ರಾಮಾಂತರ 180, ಬೀದರ್ 318, ಚಾಮರಾಜನಗರ 108, ಚಿಕ್ಕಬಳ್ಳಾಪುರ 175, ಚಿಕ್ಕಮಗಳೂರು 142, ಚಿತ್ರದುರ್ಗ 74, ದಕ್ಷಿಣ ಕನ್ನಡ 218, ದಾವಣಗೆರೆ 199, ಧಾರವಾಡ 283, ಗದಗ 70, ಹಾಸನ 320, ಹಾವೇರಿ 36, ಕಲಬುರಗಿ 513, ಕೊಡಗು 97, ಕೋಲಾರ 146, ಕೊಪ್ಪಳ 100, ಮಂಡ್ಯ 279, ಮೈಸೂರ 568, ರಾಯಚೂರು 228, ರಾಮನಗರ71, ಶಿವಮೊಗ್ಗ 169, ತುಮಕೂರು 652, ಉಡುಪಿ 163, ಉತ್ತರ ಕನ್ನಡ 106, ವಿಜಯಪುರ 302, ಯಾದಗಿರಿ 190.