ರಾಜ್ಯದಲ್ಲಿ ಇಂದು 2566 ಮಂದಿಗೆ ಕೊರೊನಾ-13 ಸಾವು

ಬೆಂಗಳೂರು ಮಾ26- ರಾಜ್ಯದಲ್ಲಿ ಮಹಾಮಾರಿ ಕೊರೊನಾ ಸೋಂಕಿನ‌ ಅಬ್ಬರ ಮುಂದುವರೆದಿದ್ದು, ಇಂದು2566 ಹೊಸ ಪ್ರಕರಣಗಳು ದಾಖಲಾಗಿವೆ.ಇಂದು 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಮೂವರು, ಬೆಂಗಳೂರು ಗ್ರಾಮಾಂತರ ಮತ್ತು ಕಲ್ಬುರ್ಗಿಯಲ್ಲಿ ತಲಾ ಇಬ್ಬರು ಸೋಂಕಿತರು, ಬೆಳಗಾವಿ, ಬೀದರ್ ಮಂಡ್ಯ ,ಮೈಸೂರು, ತುಮಕೂರು ಹಾಗೂ ಕೋಲಾರದಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.
ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಸೋಂಕಿನ ಪ್ರಮಾಣ ಏರುತ್ತಿದೆ.
ಇಂದು ಆಸ್ಪತ್ರೆ ಯಿಂದ 1207 ಮಂದಿ ಬಿಡುಗಡೆ ಯಾಗಿದ್ದು, ಇದುವರೆಗೆ ಒಟ್ಟು 948988 ಮಂದಿ ಆಸ್ತತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ 19553 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12,484 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 981044ಕ್ಕೆ ಏರಿಕೆಯಾಗಿದೆ. 174 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ದೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 1490 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇಂದು ಬೆಂಗಳೂರಿನಲ್ಲಿ 632 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 424349ಕ್ಕೆ ಏರಿಕೆಹಾಗಿದ್ದು, ಒಟ್ಟು 13327 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 406449ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 3 ಸೋಂಕಿತರು ಮೃತಪಟ್ಟಿದ್ದು ಇದುವರೆಗೂ ಬೆಂಗಳೂರಿನಲ್ಲಿ ಕೊರೋನಾಗೆ 4572ಬಲಿಯಾಗಿದ್ದಾರೆ.

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 09, ಬಳ್ಳಾರಿ 27, ಬೆಳಗಾವಿ 25, ಬೆಂಗಳೂರು ಗ್ರಾಮಾಂತರ 59, ಬೀದರ್ 65, ಚಾಮರಾಜನಗರ 01, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 06, ಚಿತ್ರದುರ್ಗ 20, ದಕ್ಷಿಣ ಕನ್ನಡ 72, ದಾವಣಗೆರೆ 06, ಧಾರವಾಡ 31, ಗದಗ 14, ಹಾಸನ 32, ಹಾವೇರಿ 05, ಕಲಬುರಗಿ 109, ಕೊಡಗು 06, ಕೋಲಾರ 45, ಕೊಪ್ಪಳ 06, ಮಂಡ್ಯ 34, ಮೈಸೂರು67, ರಾಯಚೂರು 12, ರಾಮನಗರ 01, ಶಿವಮೊಗ್ಗ 14, ತುಮಕೂರು 126, ಉಡುಪಿ 210, ಉತ್ತರ ಕನ್ನಡ 13, ವಿಜಯಪುರ 36, ಯಾದಗಿರಿ 10.