
ಕಲಬುರಗಿ: ಸೆ.08 : ಹೊಸದಾಗಿ 188 ಇಂದಿರಾ ಕ್ಯಾಂಟೀನ್‍ಗಳನ್ನು ಶೀಘ್ರವೇ ಆರಂಭಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 35 ಇಂದಿರಾ ಕ್ಯಾಂಟೀನ್‍ಗಳನ್ನು ಹೊಸದಾಗಿ ತೆರೆಯಲಾಗುವುದು’ ಎಂದು ನಗರಾಭಿವೃದ್ಧಿ ಮತ್ತು ನಗರಯೋಜನಾ ಸಚಿವ ಬಿ.ಎಸ್.ಸುರೇಶ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಕಲಬುರಗಿ ಜಿಲ್ಲೆ ಕಲಬುರಗಿ ನಗರಾಭಿವೃದ್ದಿ ಹಾಗೂ ನಗರ ಯೋಜನಾ ಸಚಿವರ ಪೌರಡಳಿತ ಹಾಗೂ ಹಜ್ ಸಚಿವರು ಕರ್ನಾಟಕ ಸರ್ಕಾರದ ಇವರ ಜಂಟಿ ಅಧ್ಯಕ್ಷರ ಕಲಬುರಗಿ ವಿಭಾಗದ ಎಲ್ಲಾ ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಹಿಂದಿನ ಸರ್ಕಾರ ರಾಜಕಾರಣ ಮಾಡಿ ಆ ಕ್ಯಾಂಟೀನ್‍ಗಳನ್ನು ಮುಚ್ಚುವ ಸ್ಥಿತಿಗೆ ತೆಗೆದುಕೊಂಡು ಹೋಗಿತ್ತು. ರಾಜ್ಯದಲ್ಲಿರುವ ಸುಸ್ಥಿತಿಯಲ್ಲಿ ಇಲ್ಲದ ಕ್ಯಾಂಟೀನ್‍ಗಳಿಗೆ ನಗರಾಭಿವೃದ್ಧಿ ಇಲಾಖೆಯ 20 ಕೋಟಿ ವೆಚ್ಚದಲ್ಲಿ ಪುನಶ್ಚೇತನ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇಂದಿರಾ ಕ್ಯಾಂಟೀನ್‍ಗಳಲ್ಲಿ ಆಯಾಯಾ ಭಾಗದ ಆಹಾರ ಪದ್ಧತಿ ಪರಿಚಯಿಸಲಾಗುವುದು. ಇದಕ್ಕಾಗಿ ಸರ್ಕಾರ ಪ್ರತಿ ಊಟಕ್ಕೆ ನೀಡುವ ಹಣವನ್ನು 57ರಿಂದ 62ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವ ಸುರೇಶ್ ತಿಳಿಸಿದರು.
ಏಳು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಬೇಕು. ಜಿಲ್ಲಾಧಿಕಾರಿಗಳು ಖಾತೆಯಲ್ಲಿ ದುಡ್ಡು ಇಟ್ಟುಕೊಂಡು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ. ಅಗತ್ಯ ಬಿದ್ದರೆ ಟ್ಯಾಂಕರ್ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯಲ್ಲಿ ಅನೇಕ ನೀರಿನ ಸಮಸ್ಯೆಗಳಿಗೆ ಇದ್ದು ಅಧಿಕಾರಿಗಳು ವಿಳಂಭ ಮಾಡದೆ ಕ್ರಮಕೈಗೊಳ್ಳಬೇಕೆಂದರು ಮಳೆಗಾಲ ಪ್ರಾರಂಭವಾಗಿರುವುದರಿಂದ ಕಲುಷಿತ ನೀರು ನದಿಗಳಿಗೆ ಸೇರ್ಪಡೆಗೊಂಡು ಜನರು ಅಸ್ಥವಸ್ಥೆಗೊಂಡು ಸಾವನ್ನುಪ್ಪತ್ತಿದ್ದಾರೆ. ನೀರು ಪೈಪ್‍ಲೈನ್ ಕನೆಕ್ಷನ್ ಯು.ಜಿ.ಡಿ. ಕನೆಕ್ಷನ್ ಒಂದೆ ಕಡೆ ಇದ್ದು ಅವುಗಳನ್ನು ತುರ್ತಾಗಿ ಸರಿಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮ ಪ್ರಭು ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಎಲ್ ಆ್ಯಂಡ್ ಟಿ. ಅವರಿಗೆ ಟೆಂಡರ್ ನೀಡಿದ್ದಾರೆ ಅವರು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿಲ್ಲ ಆದರೆ ತೆಗ್ಗುಳನ್ನು ಸರಿಯಾಗಿ ಮುಚ್ಚಿರುವುದಿಲ್ಲ್ಲ ಅವರ ಮೇಲೆ ಕ್ರಮಕೈಗೊಳ್ಳಲು ಸಭೆ ಗಮನಕ್ಕೆ ತಂದರು. ಸಚಿವರು ಮಾತನಾಡಿ, ಕಂಪನಿಗಳ ಮಾಲೀಕರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗ್ಗೆ ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು
ಬಡವರಿಗೆ, ಮಧ್ಯಮ ವರ್ಗದವರಿಗೆ ನಿವೇಶನ ಕೊಡಲು ಉದ್ದೇಶಿಸಲಾಗಿದೆ. ಈನಿಟ್ಟಿನಲ್ಲಿ ಅಭಿವೃದ್ಧಿ ಪ್ರಾಧಿಕಾರಗಳು ಹಾಗೂ ರೈತರು ತಲಾ ಶೇ50ರಷ್ಟು ಪಾಲುದಾರಿಕೆಯೊಂದಿಗೆ ಲೇಔಟ್ ಅಭಿವೃದ್ಧಿಪಡಿಸುವ ಚಿಂತನೆ ನಡೆಯುತ್ತಿದೆ ಎಂದು ಬಹಳಷ್ಟು ಖಾಸಗಿ ವ್ಯಕ್ತಿಗಳು ಲೇಔಟ್‍ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅದರ ಬದಲು ಪ್ರಾಧಿಕಾರ ಹಾಗೂ ರೈತರ ಜೊತೆಗೂಡಿ ಎಲ್ಲ ಜಿಲ್ಲೆಗಳಲ್ಲಿ ಈ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಪ್ರಾಧಿಕಾರಗಳಿಗೆ ಲಾಭಕ್ಕಿಂತಲೂ ವೆಚ್ಚ ಸರಿದೂಗಿದರೆ ಸಾಕು’ ಎಂದರು.
ಕಲಬುರಗಿ ಸೇರಿದಂತೆ ಹಲವೆಡೆ ಸಿಡಿಪಿ(ನಗರ ಅಭಿವೃದ್ಧಿ ಯೋಜನೆ) ಆಗಿಲ್ಲ. ಹೊಸ ಸಿಡಿಪಿ ಮಾಡಲು ಶೀಘ್ರವೇ ಕ್ರಮವಹಿಸಲಾಗುವುದು. ಹೊಸ ಸಿಡಿಪಿ ವ್ಯಾಪ್ತಿಯ ಪ್ರದೇಶಗಳನ್ನು ನಗರ–ಸ್ಥಳೀಯ ಸಂಸ್ಥೆಗಳಿಗೆ ಸೇರಿಸಿ ಅವುಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸಿ, ತೆರಿಗೆ ಸಂಗ್ರಹಿಸಲಾಗುವುದು’ ಎಂದರು.
ವ್ಯಾಪಾರಿಗಳಿಗೆ ಉದ್ಯಮ ಪರವಾನಗಿ ನೀಡುವುದನ್ನು ಸರಳೀಕರಣಗೊಳಿಸಲು ಕ್ರಮವಹಿಸಲಾಗುವುದು. ಜೆಸ್ಕಾಂನಿಂದ ಯಾವ್ಯಾವ ವಾಣಿಜ್ಯ ಕಟ್ಟಡಗಳಿಗೆ ಪರವಾನಗಿ ಪಡೆಯಲಾಗಿದೆಯೋ ಅವರಿಗೆಲ್ಲ ವಾಣಿಜ್ಯ ಎಂದು ಪರಿಗಣಿಸಿ, ಪರವಾನಗಿ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದರು.
ಕಲಬುರಗಿ ವಿಭಾಗಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಗಳ ಕಲಬುರಗಿ ಮತ್ತು ಬಳ್ಳಾರಿ, ನಗರಾಭಿವೃದ್ಧಿ ಪ್ರಾಧಿಕಾರಗಳು ಕಲಬುರಗಿ ಯಾದಗಿರಿ, ಬಳ್ಳಾರಿ , ಬೀದರ್, ರಾಯಚೂರು, ಕೊಪ್ಪಳ ವಿಜಯನಗರ ಮತ್ತು ತೋರಣಗಲ್ಲು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಇವುಗಳಿಗೆ ಸಂಬಂಧಿಸಿದಂತೆ ಮತ್ತು ಕಲಬರುಗಿ ವಿಭಾಗದ ಯೋಜನೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ ನಾಗಭೂಷಣ್, ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕಿ ಎನ್. ಮಂಜುಶ್ರೀ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿವ್ಯವಸ್ಥಪಕ ನಿರ್ದೇಶಕ ಬಿ. ಶರತ್ , ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಆತುಲ್, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತಕುಮಾರ ಮಿಶ್ರಾ, ಯಾದಗಿರಿ ಜಿಲ್ಲಾಧಿಕಾರಿ ಡಾ, ಪಿ.ಸುಶೀಲಾ, ಬೀದರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಪಾಟೀಲ ಭುವನೇಶ್ವರ ದೇವಿದಾಸ, ಪೌರಾಡಳಿತ ಅಧಿಕಾರಿಗಳು ಇಲಾಖೆ ಮುಖ್ಯಸ್ಥರು,ಅಧಿಕಾರಿಗಳು ಭಾಗವಹಿಸಿದ್ದರು.