ರಾಜ್ಯದಲ್ಲಿ ಅಮೂಲ್ ಕಂಪನಿಯ ಉತ್ಪನ್ನ ನಿಷೇಧ ಮಾಡಿ: ಶಾಂತಗೌಡ ಪಾಟೀಲ್

ಶಹಾಪುರ :ಎ.11: ಸಹಕಾರಿ ಸಂಸ್ಥೆಗಳ ನಡುವೆ ಅಲಿಖಿತ ನಿಯಮ ಇದೆ. ಒಂದು ರಾಜ್ಯದಲ್ಲಿ ಹಾಲಿನ ಕೊರತೆ ಇಲ್ಲದ ಇನ್ನೊಂದು ರಾಜ್ಯದ ಹಾಲಿನ ಸಂಸ್ಥೆ ಆ ರಾಜ್ಯಕ್ಕೆ ಪ್ರವೇಶ ಕೊಡುವ ಹಾಗೆ ಇಲ್ಲ, ಸದ್ಯ ಕರ್ನಾಟಕದಲ್ಲಿ ಹಾಲಿನ ಕೊರತೆ ಇಲ್ಲ. ಆದ್ದರಿಂದ ಗುಜರಾತ ಮೂಲದ ಅಮೂಲ್ ಕಂಪನಿಯ ಹಾಲು,ಮೊಸರು ಮತ್ತು ಇತರ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟವನ್ನು ನೀಷೇದ ಮಾಡಬೇಕು, ಕೆಎಂಎಫ್ ಮತ್ತು ಅಮೂಲ್ ಎರಡು ಸಂಸ್ಥೆಗಳನ್ನು ವಿಲೀನ ಮಾಡಬಾರದು. ಕರ್ನಾಟಕ ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಅಧೀಕ ರೈತರ ಹೈನುಗಾರಿಕೆಯು ಕೆಎಂಎಫ್ ಮೇಲೆ ಅವಲಂಬಿತವಾಗಿದೆ ಮತ್ತು ಕೆಎಂಎಫ್‍ನಲ್ಲಿ ಕರ್ನಾಟಕ ರಾಜ್ಯದ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಉದ್ಯೋಗವನ್ನು ಮಾಡುತ್ತಿದ್ದಾರೆ. ಕೆಎಂಎಫ್ ಮತ್ತು ಅಮೂಲ್ ಎರಡು ಸಂಸ್ಥೆಗಳ ವಿಲೀನಗೊಂಡರೆ 2 ಲಕ್ಷ ಜನ ಉದ್ಯೋಗದಿಂದ ವಂಚಿತರಾಗುತ್ತಾರೆ, ಮತ್ತು ಅಮೂಲ್ ಕಂಪನಿಯು ತನ್ನ ಉತ್ಪನ್ನಗಳನ್ನು ತಯಾರಿಸಲು ಬೆಂಗಳೂರಿನ ಕೋರಮಂಗಲದಲ್ಲಿ 6 ಎಕರೆ ಜಾಗವನ್ನು ಖರೀದಿ ಮಾಡಿದೆ. ಕರ್ನಾಟಕ ಸರ್ಕಾರವು ಅಮೂಲ್ ಸಂಸ್ಥೆಯ 6 ಎಕರೆ ಜಾಗವನ್ನು ಮುಟ್ಟುಗೋಲು ಮಾಡಕೊಳ್ಳಬೇಕು. ಈ ಮೂಲಕ ಕರ್ನಾಟಕ ಸರ್ಕಾರವು ರಾಜ್ಯದ ಕೆಎಂಎಫ್ ಸಂಸ್ಥೆಯ ಪರವಾಗಿ ಮತ್ತು ರಾಜ್ಯದ ರೈತರ ಪರವಾಗಿ ಬೆಂಬಲವಾಗಿ ನಿಲ್ಲಬೇಕು ಮತ್ತು ಕೆಎಂಎಫ್ ಸಂಸ್ಥೆಯ ಉತ್ಪನ್ನಗಳ ಪರವಾಗಿ ಸರ್ಕಾರವು ಬೆಂಬಲ ನೀಡಬೇಕು. ಅಮೂಲ್ ಸಂಸ್ಥೆಯ ಉತ್ಪನ್ನಗಳನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು, ಒಂದು ವೇಳೆ, ವಿಳಂಬ ಮಾಡಿದರೆ ಕಾಂಗ್ರೇಸ್ ಪಕ್ಷದಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಶಾಂತಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ