ರಾಜ್ಯದಲ್ಲಿ ಅತಿ ಕಡಿಮೆ ಮಂದಿಗೆ ಸೋಂಕು: 332 ಮಂದಿಗೆ ಕೊರೊನಾ, 11 ಸಾವು

ಬೆಂಗಳೂರು, ಅ.12- ರಾಜ್ಯದಲ್ಲಿಂದು ಅತಿ ಕಡಿಮೆ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಸಾವಿನ ಸಂಖ್ಯೆ ತುಸು ಏರಿಕೆಯಾಗಿದೆ.

ರಾಜ್ಯದಲ್ಲಿ ‌ಇಂದು ಹತ್ತು ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ.

ರಾಜ್ಯದಲ್ಲಿ ಇಂದು ಹೊಸದಾಗಿ 332 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 11 ಮದಿ ಸೋಂಕಿನಿಂದ ಮೃತಪಟ್ಟಿದ್ದು 515 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ,, ಗದಗ, ಹಾವೇರಿ, ಕಲಬುರಗಿ,ಕೊಪ್ಪಳ,ರಾಯಚೂರು, ಮತ್ತು ಯಾದಗಿರಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.41 ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ. 3.31 ಕ್ಕೆ ಏರಿಕೆಯಾಗಿದೆ

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9,712 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,81,732 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,34,085 ಕ್ಕೆ ಹೆಚ್ಚಳವಾಗಿದೆ

ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,906 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಇಳಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಳಿಕೆಯಾಗಿದೆ .ಇಂದು 145 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 5 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 125 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

79 ಸಾವಿರ ಪರೀಕ್ಷೆ

ರಾಜ್ಯದಲ್ಲಿ ಇಂದು 79,177 ಮಂದಿ್ಗೆಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 4,89,50,,674 ಕ್ಕೆ ಹೆಚ್ಚಳವಾಗಿದೆ.

ಬಾಕ್ಸ್

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

  • ಬಾಗಲಕೋಟೆ – 0
  • ಬಳ್ಳಾರಿ – 1
  • ಬೆಳಗಾವಿ -10
  • ಬೆಂಗಳೂರು ಗ್ರಾಮಾಂತರ- 6
  • ಬೆಂಗಳೂರು ನಗರ. – 145
  • ಬೀದರ್ -0
  • ಚಾಮರಾಜನಗರ – 0
  • ಚಿಕ್ಕಬಳ್ಳಾಪುರ – 0
  • ಚಿಕ್ಕಮಗಳೂರು- 0
  • ಚಿತ್ರದುರ್ಗ – 1
  • ದಕ್ಷಿಣ ಕನ್ನಡ -27
  • ದಾವಣಗೆರೆ -2
  • ಧಾರವಾಡ -4
  • ಗದಗ – 0
  • ಹಾಸನ – 21
  • ಹಾವೇರಿ – 0
  • ಕಲಬುರಗಿ- 0
  • ಕೊಡಗು – 5
  • ಕೋಲಾರ -1
  • ಕೊಪ್ಪಳ -0
  • ಮಂಡ್ಯ – 8
  • ಮೈಸೂರು -39
  • ರಾಯಚೂರು- 0
  • ರಾಮನಗರ -3
  • ಶಿವಮೊಗ್ಗ – 6
  • ತುಮಕೂರು -12
  • ಉಡುಪಿ – 17
  • ಉತ್ತರ ಕನ್ನಡ – 12
  • ವಿಜಯಪುರ – 5
  • ಯಾದಗಿರಿ- 0