ರಾಜ್ಯದಲ್ಲಿಯೇ ಕೂಡ್ಲಿಗಿ ಮಾದರಿ ಕ್ಷೇತ್ರವನ್ನಾಗಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿ – ಎನ್ ವೈ ಗೋಪಾಲಕೃಷ್ಣ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 4 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ಸಾವಿರ ಕೋಟಿ ಅನುದಾನ ತರುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ಅಲ್ಲದೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸವಿದ್ದಲ್ಲಿ ಮತ್ತೊಮ್ಮೆ ಅವಕಾಶ ನೀಡಿದರೆ ಕೂಡ್ಲಿಗಿ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಬಡೇಲಡಕು ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ
ನೆರವೇರಿಸಿನಂತರ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಿ ಆಶೀರ್ವದಿಸಿದ್ದರಿಂದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಪಟ್ಟಣದಲ್ಲಿ ಮಿನಿ ವಿಧಾನಸೌಧ, ಶುದ್ಧ ಕುಡಿಯುವ ನೀರು, ಕೆರೆ ನೀರು ತುಂಬುವ ಯೋಜನೆ, ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕನ್ನು ಸೇರ್ಪಡೆಮಾಡಿಸಿದ್ದು 400 ಕ್ಕೂ ಹೆಚ್ಚು ಶಾಲಾಕಟ್ಟಡ ನಿರ್ಮಾಣ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಇನ್ನೊಮ್ಮೆ ನೀವು ಆಶೀರ್ವದಿಸಿ ಗೆಲ್ಲಿಸಿದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಿ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಶಾಸಕರು ತಿಳಿಸಿದರು.
ಸಿಟ್ಟಿರಬಹುದು ಆದರೆ ಪ್ರೀತಿ ಇದೆ :- ನನ್ನ ಹತ್ತಿರ ಯಾವುದೋ ಬೇಕಾಬಿಟ್ಟಿ ಮಾತುಗಳನ್ನು ಆಡುತ್ತಿದ್ದಾರೆ ಅದನ್ನು ನಾನು ಖಂಡಿಸಿ ಸಿಟ್ಟುಮಾಡಿಕೊಳ್ಳುವೆ ಆದರೆ ಕ್ಷೇತ್ರದ ಅಭಿವೃದ್ಧಿ ಕೆಲಸ ಕೇಳಿದರೆ ಪ್ರೀತಿಯಿಂದ ಅದನ್ನು ಸ್ವೀಕರಿಸಿ ಅಭಿವೃದ್ಧಿಗೆ ಮುಂದಾಗುವೆ ಎಂದರು.
ಇದಕ್ಕೂ ಮೊದಲು ಕೂಡ್ಲಿಗಿ ಪಟ್ಟಣದ ರಾಮನಗರ ವೃತ್ತದಲ್ಲಿ ಸ್ಲಂಬೋರ್ಡ್ ವತಿಯಿಂದ 17 ಲಕ್ಷದ ಸಿಸಿ ರಸ್ತೆಗೆ ಶಂಕು ಸ್ಥಾಪನೆ ಮತ್ತು ಕೊಟ್ಟೂರು ರಸ್ತೆಯ ಕೆಇಬಿ ಸ್ಟೇಷನ್ ಎದುರುಗಡೆ ಯಾದವ ಸಮುದಾಯದ ಕಚೇರಿಯ ಉದ್ಘಾಟನೆ, ನಂತರ ಹಾರಕಭಾವಿ ಗ್ರಾಮದ ಶ್ರೀ ಪೆನ್ನಳ್ಳಿ ಬಸವೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆ ಹೆಚ್ ವೀರನಗೌಡ, ಕೆ.ಎಂ ತಿಪ್ಪೇಸ್ವಾಮಿ, ಚಿನ್ನಪ್ರಾಪ್ಪ, ಮಲ್ಲಿಕಾರ್ಜುನ ಗೌಡ, ದುರುಗೇಶ ಭೀಮೇಶ್, ಸೂರ್ಯಪಾಪಣ್ಣ, ಪವಿತ್ರ, ಹಾಗೂ ಪಟ್ಟಣ ಪಂಚಾಯತಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.