ರಾಜ್ಯದಲ್ಲಿನ  ಬರ ಘೋಷಣೆಗೆನಾಡಿದ್ದು ನಿರ್ಧಾರ: ಸಿದ್ದರಾಮಯ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.02: ರಾಜ್ಯದಲ್ಕಿನ  ಬರ  ಘೋಷಣೆ ಕುರಿತು  ನಾಡಿದ್ದು ಸೆ4 ರಂದು ಸಂಪುಟ ಸಭೆಯಲ್ಲಿ ತಿರ್ಮಾನ ಆಗಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರಿಂದು ಅಲಮಟ್ಟಿಗೆ ತೆರಳುವ ಮುನ್ನ ಜಿಲ್ಲೆಯ ತೋರಣಗಲ್ಲು ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರೊಂದಿಗೆ ಮಾತನಾಡಿ. ಈಗಾಗಲೇ  ಬರ ಅಂತಾ113 ತಾಲೂಕುಗಳನ್ನು  ಗುರುತಿಸಲಾಗಿದೆ. ಸಂಪುಟ ಸಭೆ ಬಳಿಕ 73 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ  ಪಟ್ಟಿಗೆ ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದೆ.
ಈಗಾಗಲೇ 114 ತಾಲೂಕುಗಳಲ್ಲಿ ಜಂಟಿ ಸರ್ವೇ ಮಾಡಲಾಗಿದೆ. ಈ ಪೈಕಿ 105 ತಾಲೂಕಿನಲ್ಲಿ ಬರ ಇದೆ ಅಂತಾ ವರದಿ ಬಂದಿದೆ, ವರದಿ ಅಧಾರಿಸಿ ತೀರ್ಮಾನ ಆಗಲಿದೆ.
ಇನ್ನೂ 73 ತಾಲೂಕುಗಳಲ್ಲೂ ಬರ ಇದೆ ಅಂತಾ ಹೇಳಲಾಗ್ತಿದೆ ವರದಿ ಪಡೆಯುತ್ತೇನೆ. ಜುಲೈ ಅಂತ್ಯಕ್ಕೆ
ಶೇ.56 ರಷ್ಟು ಮಳೆ ಪ್ರಮಾಣ ಕಡಿಮೆ ಆಯ್ತು ಬಳಿಕ ಅಗಷ್ಟ್‌ನಲ್ಲೂ ಮಳೆ ಕಡಿಮೆ ಆಗಿದೆ ಎಂದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ. ತಮಿಳುನಾಡಿಗೆ ಬಿಡುಗಡೆ ಮಾಡಲು ನೀರಿಲ್ಲ ನೀರು ಕೊಡಬಾರ್ದು ಅಂತಲ್ಲ ಆದ್ರೆ ಅಷ್ಟು ಪ್ರಮಾಣದ ನೀರಿಲ್ಲ.  ಕಬಿನಿ‌ ನೀರು ಬರ್ಬೆಕಿತ್ತು.  ಆದ್ರೆ ಬಂದಿಲ್ಲ ಅದಕ್ಕೆ ತಮಿಳನಾಡು ಸಂಕಷ್ಟ ಸೂತ್ರ ಹಾಕ್ತಿದೆ. ಇದ್ಕೆಲ್ಲ ಪರಿಹಾರ ಮೇಕೆ ದಾಟು ಯೋಚನೆ ಮೇಕದಾಟು ಯೋಜನೆಗೆ ಅನಗತ್ಯವಾದ ವಿರೋಧ ಮಾಡ್ತಾರೆ ಮೇಕೆದಾಟು ಯೋಜನೆ ಆದ್ರೆ 67 ಟೆಎಂಸಿ ನೀರು ಉಳಿತಾಯ  ಮಾಡಬಹುದು ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬಹುದು ಎಂದ ಅವರು. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡ್ಬೇಕು ಎಂದರು.
ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ನಾಗೇಂದ್ರ, ಕೃಷ್ಣಬೈರೇಗೌಡ , ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ  ಮೊದಲಾದವರು ಇದ್ದರು.